ಕೌಲಾಲಂಪುರ್: ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ಪ್ರಕೃತಿ ವಿಕೋಪವನ್ನುಂಟು ಮಾಡಿದೆ. ಇಂದು ನಸುಕಿನ ಜಾವ 2 ಗಂಟೆಗೆ ಕೌಲಾಲಂಪುರದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 50 ಜನರು ಮೃತಪಟ್ಟಿರುವ ಶಂಕೆ ಇದೆ. ಈ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಭೂಕುಸಿತದ ಹಿನ್ನೆಲೆ ಪರಿಹಾರ ಮತ್ತು ರಕ್ಷಣಾ ಕಾರ್ಯ ಆರಂಭಿಸಲಾಗಿದೆ. ಕೌಲಾಲಂಪುರ್‌ನಿಂದ ಉತ್ತರಕ್ಕೆ 40 ಕಿಲೋಮೀಟರ್ ದೂರದಲ್ಲಿರುವ ಬಟಾಂಗ್ ಕಾಲಿಯಲ್ಲಿನ ಕ್ಯಾಂಪ್ ಸೈಟ್‌ನ ಬಳಿ ಭೂಕುಸಿತ ಸಂಭವಿಸಿದೆ. ಈ ಭೂಕುಸಿತ ಸಂಭವಿಸಿದಾಗ, ಆ ಸಮಯದಲ್ಲಿ ಸುಮಾರು 100 ಜನರು ಇದ್ದಿರಬಹುದು ಎಂದು ಹೇಳಲಾಗುತ್ತಿದೆ.
23 ಜನರಿಗೆ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಆದ್ರೆ ನಾಪತ್ತೆಯಾಗಿರುವ ಅಂದಾಜು 50 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಸಂಪರ್ಕ ರಸ್ತೆಗೆ ಮೌನವಹಿಸಿದ ಜನಪ್ರತಿನಿಧಿಗಳು: ಕಷ್ಟಕ್ಕೆ ಊರನ್ನೇ ತೊರೆಯುತ್ತಿರುವ ಗ್ರಾಮಸ್ಥರು!!