ETV Bharat / international

ಆಸ್ಪತ್ರೆಗೆ ದಾಖಲಾದ 11% ಕೋವಿಡ್ ಸೋಂಕಿತರಿಗೆ ಶ್ವಾಸಕೋಶದ ಸಮಸ್ಯೆ - Covid 19 virus

ಕೋವಿಡ್ 19 ಸೋಂಕು​ ತಗುಲಿ ಆಸ್ಪತ್ರೆಗೆ ದಾಖಲಾದ 11% ರಷ್ಟು ರೋಗಿಗಳಲ್ಲಿ ಶ್ವಾಸಕೋಶದ ಸಮಸ್ಯೆಗಳು ಕಂಡುಬಂದಿವೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ನ್ಯಾಷನಲ್ ಹಾರ್ಟ್ ಮತ್ತು ಲಂಗ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಇಯಾನ್ ಸ್ಟೀವರ್ಟ್ ಹೇಳಿದ್ದಾರೆ.

lung problems
ಶ್ವಾಸಕೋಶದ ಸಮಸ್ಯೆ
author img

By

Published : Dec 5, 2022, 2:12 PM IST

ವಾಷಿಂಗ್ಟನ್: ಕೋವಿಡ್ 19 ಸೋಂಕು​ ತಗುಲಿ ಆಸ್ಪತ್ರೆಗೆ ದಾಖಲಾದ 11% ರಷ್ಟು ರೋಗಿಗಳಲ್ಲಿ ಶ್ವಾಸಕೋಶದ ಸಮಸ್ಯೆಗಳು ಕಂಡುಬಂದಿದ್ದು, ಈ ಸೋಂಕಿತರಿಗೆ ಭವಿಷ್ಯದಲ್ಲಿ ಆರೋಗ್ಯ ಮತ್ತೆ ಹದಗೆಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಕುರಿತಾದ ಸಂಶೋಧನಾ ಆರ್ಟಿಕಲ್​ವೊಂದನ್ನು 'ಅಮೆರಿಕನ್ ಜರ್ನಲ್ ಆಫ್ ರೆಸ್ಪಿರೇಟರಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್‌' ಪ್ರಕಟಿಸಿದೆ. ಇದರಲ್ಲಿ ವಿವಿಧ ಹಂತದ ಕೋವಿಡ್‌ ಸೋಂಕು ದೃಢಪಟ್ಟು ಚಿಕಿತ್ಸೆ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾದ ರೋಗಿಗಳಲ್ಲಿ ಫೈಬ್ರೊಟಿಕ್ ಶ್ವಾಸಕೋಶದ ಸಮಸ್ಯೆ ಕಂಡುಬರುವ ಕುರಿತು ಅಧ್ಯಯನ ಮಾಡಲಾಗಿದೆ.

ಇದನ್ನೂ ಓದಿ: Women With Long COVID Infection : ದೀರ್ಘಕಾಲ ಕೋವಿಡ್​ಗೆ ಒಳಗಾದ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ-ಕಾಳಜಿ ಅಗತ್ಯ

ಫೈಬ್ರೋಸಿಸ್ ಮತ್ತು ಗಾಯದ ರಚನೆಯಂತಹ ತೊಂದರೆಗಳು ಶ್ವಾಸಕೋಶದ ಅಂಗಾಂಶದ ಮೇಲೆ ಸಂಭವಿಸಿದರೆ ಉಸಿರಾಡಲು ಕಷ್ಟವಾಗುತ್ತದೆ. ಮತ್ತು ರಕ್ತದಲ್ಲಿನ ಆಮ್ಲಜನಕದ ಶೇಕಡಾವಾರು ಪ್ರಮಾಣವೂ ಕಡಿಮೆಯಾಗುತ್ತದೆ. ಹಾನಿಗೊಳಗಾದ ಶ್ವಾಸಕೋಶಗಳು ಮತ್ತೆ ವಾಸಿಯಾಗುವುದಿಲ್ಲ ಎಂಬ ಅಂಶದ ಜೊತೆಗೆ, ಭವಿಷ್ಯದಲ್ಲಿ ಹೆಚ್ಚಿನ ತೊಂದರೆ ಉಂಟಾಗುತ್ತದೆ ಎಂದು ಲಂಡನ್‌ನ ಇಂಪಿರಿಯಲ್ ಕಾಲೇಜಿನ ನ್ಯಾಷನಲ್ ಹಾರ್ಟ್ ಮತ್ತು ಲಂಗ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಇಯಾನ್ ಸ್ಟೀವರ್ಟ್ ಹೇಳಿದ್ದಾರೆ.

ಇದನ್ನೂ ಓದಿ: 16ರ ಬಾಲಕ 70 ರ ವೃದ್ಧನಂತೆ ವರ್ತನೆ.. ಇದು ಕೋವಿಡ್​ ನೀಡಿದ ಮರ್ಮಾಘಾತ

ಹಲವು ಜನರಿಗೆ ದೀರ್ಘಕಾಲದವರೆಗೆ ಉಸಿರಾಟದ ತೊಂದರೆ ಇರುತ್ತದೆ. ಕೋವಿಡ್​ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದ ಹಲವರು ಶ್ವಾಸಕೋಶದ ಸಮಸ್ಯೆಗಳನ್ನು ಹೊಂದಿದ್ದಾರೆ. ಇಂತಹ ರೋಗಿಗಳು ಅಗತ್ಯಕ್ಕೆ ತಕ್ಕಂತೆ ಸ್ಕ್ಯಾನಿಂಗ್ ಜತೆಗೆ ಶ್ವಾಸಕೋಶದ ಕಾರ್ಯನಿರ್ವಹಣೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಿಟಿ ಸ್ಕ್ಯಾನ್ ಮಾಡುವಾಗ ಶ್ವಾಸಕೋಶದ ಮಾದರಿಯಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇನ್ನು, ಈ ಒಂದು ಅಧ್ಯಯನಕ್ಕೆ ಒಟ್ಟು 3,500 ರೋಗಿಗಳನ್ನು ಪರೀಕ್ಷಿಸಲಾಯಿತು. ಅವರಲ್ಲಿ 209 ಜನರಿಗೆ ಸಮಸ್ಯೆಗಳು ಕಂಡುಬಂದಿವೆ.

ಇದನ್ನೂ ಓದಿ: ಆರೋಗ್ಯವಂತ ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.