ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್): ವೆಲ್ಲಿಂಗ್ಟನ್‌ನ ನಾಲ್ಕು ಅಂತಸ್ತಿನ ಹಾಸ್ಟೆಲ್‌ನಲ್ಲಿ ಮಂಗಳವಾರ ಭಾರಿ ಅಗ್ನಿ ದುರಂತವೊಂದು ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯೂಜಿಲ್ಯಾಂಡ್ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ನಗರ ಶೋಧ ಮತ್ತು ರಕ್ಷಣಾ ಸಿಬ್ಬಂದಿ ವೆಲ್ಲಿಂಗ್ಟನ್ ಹಾಸ್ಟೆಲ್‌ನ ಹೊಗೆಯಾಡುತ್ತಿರುವ ಭಗ್ನಾವಶೇಷಗಳಿಂದ ಬದುಕುಳಿದವರಿಗಾಗಿ ಕಾರ್ಯಾಚರಣೆ ನಡಸುತ್ತಿದ್ದಾರೆ. ರಾತ್ರಿಯಿಡೀ ಸಂಭವಿಸಿದ ಭೀಕರ ಬೆಂಕಿ ಕೆನ್ನಾಲಿಗೆಗೆ 10 ಜನರು ಜೀವ ಕಳೆದುಕೊಂಡಿದ್ದಾರೆ.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯೂಜಿಲ್ಯಾಂಡ್ ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಅವರು ಈ ದುರ್ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಇನ್ನೂ ಹೆಚ್ಚಿನ ಸಾವು ನೋವಿನ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ 12:30 ರ ಸುಮಾರಿಗೆ ಲೋಫರ್ಸ್ ಲಾಡ್ಜ್ ಹಾಸ್ಟೆಲ್‌ಗೆ ಅಗ್ನಿ ಶಾಮಕ ದಳಗಳನ್ನು ಕರೆಯಲಾಗಿದೆ. ಬೆಂಕಿ - ನಂದಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮೆಕ್ಸಿಕೋ: ಟ್ರಕ್-ವ್ಯಾನ್ ಡಿಕ್ಕಿಯಾಗಿ 26 ಜನರ ದಾರುಣ ಸಾವು
ಆದರೆ ಕಟ್ಟಡದಲ್ಲಿ ಅಗ್ನಿ ನಂದಿಸುವ ವ್ಯವಸ್ಥೆ ಇರಲಿಲ್ಲ. ಅಗ್ನಿ ಶಮನಕ್ಕೆ ಬೇಕಾದ ಸ್ಪ್ರಿಂಕ್ಲರ್‌ಗಳಿರಲಿಲ್ಲ ಎಂದು ಅಧಿಕಾರಿಗಳು ಇದೇ ವೇಳೆ ದೃಢಪಡಿಸಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ವೆಲ್ಲಿಂಗ್ಟನ್‌ನ ಲೋಫರ್ಸ್ ಲಾಡ್ಜ್ ಹಾಸ್ಟೆಲ್‌ನಲ್ಲಿ ಐವತ್ತೆರಡು ಜನರು ಇದ್ದರು ಎಂದು ಹೇಳಲಾಗುತ್ತಿದೆ. ಕಾಣೆ ಆದವರನ್ನು ಹುಡುಕಲಾಗುತ್ತಿದೆ ಎಂದು ವೆಲ್ಲಿಂಗ್ಟನ್ ಅಗ್ನಿಶಾಮಕ ಮತ್ತು ತುರ್ತು ಜಿಲ್ಲಾ ವ್ಯವಸ್ಥಾಪಕ ನಿಕ್ ಪ್ಯಾಟ್ ಹೇಳಿದ್ದಾರೆ. ಮಧ್ಯರಾತ್ರಿ 12:30ರ ಸುಮಾರಿಗೆ ಅಗ್ನಿ ದುರಂತದ ಮಾಹಿತಿ ಪಡೆದು ಇಲ್ಲಿಗೆ ಧಾವಿಸಿ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಗ್ನಿ ದುರಂತ ಕಂಡ ಜನ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಗ್ನಿಶಾಮಕ ದಳದ ಅಧಿಕಾರಿ, "ಇದು ನಮ್ಮ ಕೆಟ್ಟ ದುಃಸ್ವಪ್ನವಾಗಿದೆ. ಇದಕ್ಕಿಂತ ಪರಿಸ್ಥಿತಿ ಇನ್ನೊಂದಿಲ್ಲ’’ ಎಂದು ಹೇಳಿದ್ದಾರೆ. ಈ ನಡುವೆ ಅಗ್ನಿ ದುರಂತಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಅಗ್ನಿಶಾಮಕ ದಳ ಮತ್ತು ಹಿರಿಯ ಅಧಿಕಾರಿಗಳ ಜೊತೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:'ನೀವು ರಾಜಕೀಯಕ್ಕೆ ಧುಮುಕಿದ್ದೀರಿ, ಏಕೆ ಪಕ್ಷ ಕಟ್ಟಬಾರದು?': ಸೇನೆಯ ವಿರುದ್ಧ ಇಮ್ರಾನ್ ಖಾನ್ ವಾಗ್ದಾಳಿ
ವೆಲ್ಲಿಂಗ್ಟನ್ ಸಿಟಿ ಕೌನ್ಸಿಲ್ ವಕ್ತಾರ ರಿಚರ್ಡ್ ಮ್ಯಾಕ್ಲೀನ್ ಮಾತನಾಡಿ, ಬೆಂಕಿಯಿಂದ ಪಾರಾದ ಸುಮಾರು 50 ಜನರಿಗೆ ಇಲ್ಲಿ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಥೈಲ್ಯಾಂಡ್ ಚುನಾವಣಾ ಫಲಿತಾಂಶ.. ಮಿಲಿಟರಿ ಪಕ್ಷಗಳನ್ನು ಸೋಲಿಸಿದ ಪ್ರತಿಪಕ್ಷಗಳು