ETV Bharat / international

ನಿಯಂತ್ರಣಕ್ಕೆ ಬಾರದ ಕೊರೊನಾ... ಲಂಡನ್​​ನಲ್ಲಿ ಇಂದಿನಿಂದ ಮತ್ತೆ ಕಠಿಣ ಲಾಕ್​ಡೌನ್​ ಜಾರಿ! - ಇಂದಿನಿಂದ ಯುಕೆಯಲ್ಲಿ ಲಾಕ್​ಡೌನ್​ ಮತ್ತಷ್ಠು ಕಠಿಣ

ಇಂಗ್ಲೆಂಡ್​​ನಲ್ಲಿ ಕೊರೊನಾ ವೈರಸ್​ ಹಾವಳಿ ಮತ್ತಷ್ಟು ಉಲ್ಭಣಗೊಂಡಿರುವ ಕಾರಣ ಇಂದಿನಿಂದ ಕಠಿಣ ಲಾಕ್​ಡೌನ್​ ಜಾರಿಗೊಳಿಸಲು ಇಂಗ್ಲೆಂಡ್​ ಸರ್ಕಾರ ಮುಂದಾಗಿದೆ.

UK enter tougher COVID-19 lockdown
UK enter tougher COVID-19 lockdown
author img

By

Published : Oct 23, 2020, 10:03 PM IST

ಲಂಡನ್​( ಯುಕೆ) : ಮಹಾಮಾರಿ ಕೊರೊನಾ ವೈರಸ್​ಗೆ ಲಂಡನ್​ ತತ್ತರಿಸಿ ಹೋಗಿದ್ದು, ಹೀಗಾಗಿ ಇಂದಿನಿಂದ ಲಾಕ್​ಡೌನ್​ 2 ಜಾರಿಗೊಳಿಸಲಾಗಿದೆ. ಇದೀಗ ಈ ಹಿಂದಿನಿಗಿಂತಲೂ ಕಠಿಣ ಕ್ರಮ ಜಾರಿಗೊಳಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ವಿವಿಧ ದೇಶಗಳು ಕೊರೊನಾ ವೈರಸ್​​ನಿಂದ ಹೊರಬರುತ್ತಿರುವ ಮಧ್ಯೆ ಯಕೆಯಲ್ಲಿ ಲಕ್ಷಾಂತರ ಜನರು ಕೊರೊನಾ ಸೋಂಕಿಗೊಳಗಾಗಿರುವ ಕಾರಣ ಇದೀಗ ಕಠಿಣ ಲಾಕ್​ಡೌನ್​ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ವೆಲ್ಸ್​​ನಲ್ಲಿ ಸಂಪೂರ್ಣವಾಗಿ ವ್ಯಾಪಾರ ಸ್ಥಗಿತಗೊಳ್ಳಲಿದೆ.

ಪ್ರಮುಖವಾಗಿ ಗ್ರೇಟರ್​ ಮ್ಯಾಂಚೆಸ್ಟರ್​, ವೇಲ್ಸ್​​, ದಕ್ಷಿಣ ಯಾರ್ಕ್​ಷೈರ್​​ನಲ್ಲಿ ಕಠಿಣ ಲಾಕ್​ಡೌನ್​ ಜಾರಿಗೊಳ್ಳಲಿದೆ. ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದ್ದು, ಪಬ್​, ಬಾರ್​ ಸಂಪೂರ್ಣವಾಗಿ ಮುಚ್ಚಲಾಗಿದೆ. ಹಾಲ್​ಗಳು, ಕ್ಯಾಸಿನೊ, ಬೆಟ್ಟಿಂಗ್​ ಅಂಗಡಿ ಹಾಗೂ ಸಾಫ್ಟ್​ ಪ್ಲೇ ಕೇಂದ್ರ ಬಂದ್​ ಆಗಲಿವೆ.

ಖಾಸಗಿ ಉದ್ಯಾನವನ, ಹೊರಗಡೆ ಸೇರುವುದು ಜತೆಗೆ ಬೇರೆ ಸ್ಥಳಗಳಿಗೆ ಪ್ರಯಾಣ ಮಾಡುವುದನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಮುಂದಿನ 17 ದಿನಗಳ ಕಾಲ ಜನರು ಮನೆಯಲ್ಲೇ ಕಾಲ ಕಳೆಯಬೇಕಾಗಿದೆ.

ಜನರು ತಮ್ಮ ಮನೆಯಿಂದ ಹೊರಬರುವುದು ಸಂಪೂರ್ಣ ನಿಷೇಧ, ವ್ಯಾಪಾರಿಗಳಿಗೆ ನಿರ್ಬಂಧ, ರೆಸ್ಟೋರೆಂಟ್​, ಪಬ್​ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಬಂದ್​,ಆಹಾರ್​ ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ರೆ ರಾತ್ರಿ 10ರ ನಂತರ ಮಾರಾಟಕ್ಕೆ ಅವಕಾಶ. ಆದರೆ ಶಾಲೆ ಮತ್ತು ವಿಶ್ವವಿದ್ಯಾಲಯ ಓಪನ್​ ಮಾಡಲಾಗಿದೆ. ಪೂಜಾ ಸ್ಥಳ ಓಪನ್ ಇರಲಿದ್ದು, ಆರು ಜನರು ಪ್ರವೇಶಕ್ಕೆ ಅನುಮತಿ. ಲಂಡನ್​​ನಲ್ಲಿ ಸದ್ಯ 8,13,451 ಕೋವಿಡ್​ ಕೇಸ್​ಗಳಿದ್ದು, ಇದರಲ್ಲಿ ನಿನ್ನೆ ಒಂದೇ ದಿನ 21,242 ಕೇಸ್​ಗಳು ಸಿಕ್ಕಿದ್ದು, 189 ಜನರು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.