ಅಂಕಾರಾ (ಟರ್ಕಿ): ಫ್ರಾನ್ಸ್ನ ವಿಡಂಬನಾತ್ಮಕ ನಿಯತಕಾಲಿಕ ಚಾರ್ಲಿ ಹೆಬ್ಡೋ ತನ್ನ ರಕ್ಷಣಾ ಪುಟದಲ್ಲಿ ಟರ್ಕಿಯ ಅಧ್ಯಕ್ಷರ ಕುರಿತು ವಿವಾದಾತ್ಮಕ ಹಾಗೂ ಶಾಂತಿ ಕದಡುವ ವ್ಯಂಗ್ಯಚಿತ್ರ ಪ್ರಕಟಿಸಿದೆ ಎಂಬ ಆರೋಪದಲ್ಲಿ ಟರ್ಕಿಯ ಜನತೆ ಪ್ರತಿಭಟನೆ ನಡೆಸಿದ್ದಾರೆ.
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ವಿರುದ್ಧ ಚಾರ್ಲಿ ಹೆಬ್ಡೋ ಪತ್ರಿಕೆ ಅಶ್ಲೀಲವಾಗಿ ಹಾಗೂ ವಿವಾದಾತ್ಮಕವಾಗಿ ವ್ಯಂಗ್ಯ ಚಿತ್ರ ಪ್ರಕಟಿಸಿರುವುದು ಟರ್ಕಿಯಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ ಫ್ರಾನ್ಸ್ ಹಾಗೂ ಟರ್ಕಿಯ ನಡುವೆ ದ್ವೇಷಮಯ ತ್ವೇಷಮಯ ವಾತಾವರಣ ಸೃಷ್ಟಿಯಾಗಿದೆ.
ಚಾರ್ಲಿ ಹೆಬ್ಡೋ ವ್ಯಂಗ್ಯ ಚಿತ್ರದ ಹಿನ್ನೆಲೆಯೇನು..?
ಕೆಲವು ದಿನಗಳ ಹಿಂದೆ ಫ್ರಾನ್ಸ್ನಲ್ಲಿ ಶಿಕ್ಷಕರೊಬ್ಬರು ತರಗತಿಯಲ್ಲಿ ಪಾಠ ಮಾಡುವಾಗ ಪ್ರವಾದಿ ಮಹಮದ್ರ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿದ್ದರು ಎಂಬ ಕಾರಣಕ್ಕೆ ಓರ್ವ ವ್ಯಕ್ತಿ ಆ ಶಿಕ್ಷಕನನ್ನು ಕೊಂದಿದ್ದನು. ಕೆಲವು ದಿನಗಳ ನಂತರ ಆತನನ್ನು ಫ್ರಾನ್ಸ್ ಪೊಲೀಸರು ಹತ್ಯೆ ಮಾಡಿದ್ದರು.
ವಿಶ್ವದಾದ್ಯಂತ ಶಿಕ್ಷಕನ ವಿರುದ್ಧ ಪ್ರತಿಭಟನೆಗಳ ಆರಂಭವಾದವು. ಫ್ರಾನ್ಸ್ ಅಧ್ಯಕ್ಷ ಇಸ್ಲಾಂ ವಿರುದ್ಧ ದೃಢ ನಿಲುವು ತೆಗೆದುಕೊಂಡಿದ್ದರು. ಮತ್ತೊಂದೆಡೆ, ಅತಿ ಮುಖ್ಯವಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಫ್ರಾನ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಟರ್ಕಿಯ ಅಧ್ಯಕ್ಷ ರ್ಡೋಗನ್ ವಿರುದ್ಧ ಹರಿಹಾಯ್ದಿದ್ದು, ಎಮ್ಯಾನ್ಯುಯಲ್ ಮಾರ್ಕೋನ್ ಮಾನಸಿಕ ಆರೋಗ್ಯದ ಬಗ್ಗೆ ವ್ಯಂಗ್ಯವಾಡಿದ್ದರು.
ಈ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ರಾಜಕೀಯ ಸಂಬಂಧವೂ ಹದೆಗೆಟ್ಟಿತ್ತು. ಫ್ರೆಂಚ್ ವಸ್ತುಗಳನ್ನು ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಚಾರ್ಲಿ ಹೆಬ್ಡೋ ಎರ್ಡೋಗನ್ ವಿರುದ್ಧ ವ್ಯಂಗ್ಯ ಚಿತ್ರ ರಚಿಸಿದೆ.