ETV Bharat / international

ಟೋಕಿಯೋ ಒಲಿಂಪಿಕ್ಸ್​​ಗಾಗಿ ಹೊಸ ದಿನಾಂಕ ಘೋಷಣೆ... ಮುಂದಿನ ವರ್ಷ ಜುಲೈ ತಿಂಗಳಲ್ಲಿ ಗೇಮ್ಸ್​!

ಕಿಲ್ಲರ್​ ಕೊರೊನಾದಿಂದ ಮುಂದೂಡಿಕೆಯಾಗಿದ್ದ ಟೋಕಿಯೋ ಒಲಿಂಪಿಕ್ಸ್​ಗಾಗಿ ಇದೀಗ ಹೊಸ ದಿನಾಂಕ ಘೋಷಣೆಯಾಗಿದ್ದು, ಮುಂದಿನ ವರ್ಷ ಜುಲೈ ತಿಂಗಳಲ್ಲಿ ಈ ಕ್ರೀಡಾಕೂಟ ನಡೆಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

Tokyo Olympics rescheduled for 23 July to 8 August 2021

author img

By

Published : Mar 30, 2020, 7:08 PM IST

ಟೋಕಿಯೋ​: ಡೆಡ್ಲಿ ವೈರಸ್‌ನಿಂದಾಗಿ 2020ರ ಟೋಕಿಯೋ ಒಲಿಂಪಿಕ್ಸ್​ ಮುಂದೂಡಿಕೆಯಾಗಿದ್ದು, ಇದೀಗ ಹೊಸ ದಿನಾಂಕ ಘೋಷಣೆ ಮಾಡಿ ಒಲಿಂಪಿಕ್​ ಸಮಿತಿ ಹಾಗೂ ಜಪಾನ್​ ಪ್ರಧಾನಿ ಕಚೇರಿ ಖಚಿತಪಡಿಸಿದೆ.

https://etvbharatimages.akamaized.net/etvbharat/prod-images/6598660_ioc.JPG
ಟೋಕಿಯೋ ಒಲಿಂಪಿಕ್ಸ್​​ಗಾಗಿ ಹೊಸ ದಿನಾಂಕ ಘೋಷಣೆ

ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಹಾಗೂ ಸಿಇಒ ತೋಶಿರೊ ಮುಟೊ ಈ ಬಗ್ಗೆ ಮಾಹಿತಿ ನೀಡಿದ್ದು, ಟೋಕಿಯೋ ಒಲಿಂಪಿಕ್ಸ್​​ ಮುಂದಿನ ವರ್ಷ 2021ರ ಜುಲೈ 23 ಆಗಸ್ಟ್​ 8ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಪ್ಯಾರಾ ಒಲಿಂಪಿಕ್ಸ್​​ ಆಗಸ್ಟ್​ 24 2021 ರಿಂದ ಸೆಪ್ಟೆಂಬರ್​ 5 ವರೆಗೆ ನಡೆಯಲಿದೆ ಎಂದು ಒಲಿಂಪಿಕ್​ ಸಮಿತಿ ತಿಳಿಸಿದೆ.

Tokyo Olympics rescheduled for 23 July to 8 August 2021
ಟೋಕಿಯೊ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ

ಟೋಕಿಯೋ ಒಲಿಂಪಿಕ್ಸ್​ ಇದೇ ವರ್ಷ ಜುಲೈ 24ರಿಂದ ಆಗಸ್ಟ್​ 9ರವರೆಗೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇದೀಗ ಮುಂದಿನ ವರ್ಷ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವಾರ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಜಪಾನ್​ ಪ್ರಧಾನಿ ಕೊರೊನಾ ವೈರಸ್​ ವಿರುದ್ಧದ ಹೋರಾಟ ನಡೆಸುವ ಉದ್ದೇಶದಿಂದ ಒಲಿಂಪಿಕ್ಸ್ ಮುಂದೂಡಿಕೆ ಮಾಡಿ ಆದೇಶ ಹೊರಡಿಸಲಾಗುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಎಲ್ಲ ದೇಶಗಳಿಂದ ಸ್ವಾಗತಾರ್ಹ ಎಂದಿದ್ದವು.

ಒಲಿಂಪಿಕ್ಸ್​ ಆಯೋಜನೆಗೊಂಡು ಇದೀಗ ಮತ್ತೊಮ್ಮೆ ಮುಂದೂಡಿಕೆಯಾಗಿರುವ ಕಾರಣ ಅತಿ ಹೆಚ್ಚು ಹಣ ವ್ಯಯವಾಗಲಿದ್ದು, ಇದು ದೊಡ್ಡ ಸವಾಲಿನ ಕೆಲಸ ಎಂದು ಜಪಾನ್​ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.