ದುಬೈ: ಭಾರತದ ಮೂಲದ ಅಬುಧಾಬಿ ನಿವಾಸಿ ರವೀಂದ್ರ ಬೋಳೂರು ಎಂಬುವವರಿಗೆ 18.66 ಕೋಟಿ ರೂ. ಮೊತ್ತದ ಲಾಟರ್ ಹೊಡೆದಿದೆ.
ಡಿಎಚ್- 10 ಮಿಲಿಯನ್ ಬಿಗ್ ಟಿಕೆಟ್ ಡ್ರಾದಲ್ಲಿ ಭರ್ಜರಿಯಾಗಿ ₹ 18.66 ಕೋಟಿ ಗೆದ್ದಿದ್ದಾರೆ. ಈ ಮೂಲಕ ಸತತ ನಾಲ್ಕನೇ ಬಾರಿಗೆ ಭಾರತೀಯ ಮೂಲದ ವ್ಯಕ್ತಿ ಯುಎಇ ಲಾಟರಿ ಗೆದ್ದಂತಾಗಿದೆ. ರವೀಂದ್ರ ಅವರು ಮಾರ್ಚ್ 26ರಂದು 085524 ನಂಬರಿನ ಟಿಕೆಟ್ ಖರೀದಿಸಿದ್ದರು.
ಡ್ರಾ ವೇಳೆ ಬೋಳೂರು ಮುಂಬೈಗೆ ಆಗಮಿಸಿದ್ದರು. ಆಯೋಜಕರ ಕರೆಯನ್ನು ಪುತ್ರ ಸ್ವೀಕರಿಸಿ ಪರಿಶೀಲನಾ ಪ್ರಶ್ನಾವಳಿಗೆ ಸಮರ್ಪಕವಾದ ಉತ್ತರ ನೀಡಿದ ಬಳಿಕ, 'ರವೀಂದ್ರ ಬೋಳೂರು ಅವರು ಡಿಎಚ್- 10 ಮಿಲಿಯನ್ ಬಿಗ್ ಲಾಟರಿ ಹೊಡೆದಿದ್ದಾರೆ' ಎಂದು ತಿಳಿಸಿದ್ದಾರೆ.