ETV Bharat / international

ಇಸ್ರೇಲ್​ನಲ್ಲಿ ಕಡ್ಡಾಯ ಮಾಸ್ಕ್​ ನಿಯಮ ರದ್ದು, ಶಿಕ್ಷಣ ಸಂಸ್ಥೆಗಳು ಪುನರಾರಂಭ - ಇಸ್ರೇಲ್​ ಕೋವಿಡ್

ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೋವಿಡ್ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದ್ದರೆ, ಪುಟ್ಟ ರಾಷ್ಟ್ರ ಇಸ್ರೇಲ್​​ನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆ ದೇಶದಲ್ಲಿ ಕಡ್ಡಾಯ ಮಾಸ್ಕ್​ ನಿಯಮವನ್ನು ರದ್ದುಗೊಳಿಸಲಾಗಿದೆ. ಜೊತೆಗೆ, ಶಿಕ್ಷಣ ಸಂಸ್ಥೆಗಳು ಕಾರ್ಯಾರಂಭ ಮಾಡಿವೆ.

Israel lifts mandatory outdoor mask wearing
ಇಸ್ರೇಲ್​ನಲ್ಲಿ ಕಡ್ಡಾಯ ಮಾಸ್ಕ್​ ನಿಯಮ ರದ್ದು
author img

By

Published : Apr 19, 2021, 7:14 AM IST

ಜೆರುಸಲೆಮ್ (ಇಸ್ರೇಲ್): ದೇಶದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಕಡ್ಡಾಯವಾಗಿ ಮಾಸ್ಕ್ ಧರಿಸುವ​ ನಿಯಮವನ್ನು ಹಿಂಪಡೆಯಲಾಗಿದೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲಾಗಿದೆ.

ಶಿಶುವಿಹಾರದಿಂದ 12 ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಮರಳಲಿದ್ದಾರೆ. ಸಣ್ಣ ಗುಂಪು ಸೇರಿ ಕಲಿಯುವಂತಹ "ಕ್ಯಾಪ್ಸುಲ್"ಗಳನ್ನು ರದ್ದುಪಡಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಯಲ್ಲಿ ಮಾಸ್ಕ್​ ಧರಿಸಿರಬೇಕೆಂದು ಶಿಕ್ಷಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್​ ಧರಿಸುವ ನಿಯಮವನ್ನು ರದ್ದುಪಡಿಸಲಾಗಿದೆ. ಸೂಪರ್​ ಮಾರ್ಕೆಟ್​ಗಳಂತಹ ಇಕ್ಕಟ್ಟಿನ ಸ್ಥಳಗಳಲ್ಲಿ ಜನರು ಮಾಸ್ಕ್​ ಧಾರಣೆ ಮಾಡಬೇಕು. ಮಾಸ್ಕ್​ ಕೋವಿಡ್ ವೈರಸ್​ ಹರಡುವುದನ್ನು ತಡೆಗಟ್ಟುತ್ತದೆ ಎಂದು ಇಸ್ರೇಲ್ ಆರೋಗ್ಯ ಸಚಿವ ಯೂಲಿ ಎಡೆಲ್‌ಸ್ಟೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಜಾಗತಿಕ ಕೋವಿಡ್ ಸೋಂಕು ಗರಿಷ್ಠ ಪ್ರಮಾಣಕ್ಕೆ ತಲುಪಿದೆ : ಡಬ್ಲ್ಯುಹೆಚ್‌ಒ ಆತಂಕ

ಇಸ್ರೇಲ್‌ನ ಕೋವಿಡ್ ಅಂಕಿಅಂಶ:‌

ಇಸ್ರೇಲ್ 2020ರ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿತು. ದೇಶದ 9.3 ಮಿಲಿಯನ್ ನಾಗರಿಕರಲ್ಲಿ ಶೇ. 53 ರಷ್ಟು ಜನರು ಫೈಝರ್ ಲಸಿಕೆಯ ಎರಡೂ ಡೋಸ್​ಗಳನ್ನು ಸ್ವೀಕರಿಸಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಇಸ್ರೇಲ್​ನಲ್ಲಿ 2020 ರ ಫೆಬ್ರವರಿಯಲ್ಲಿ ಕೋವಿಡ್ ವೈರಸ್​ ಹರಡಲು ಪ್ರಾರಂಭವಾದಾಗಿನಿಂದ ಇದುವರೆಗೆ ಒಟ್ಟು 8,36,926 ಪ್ರಕರಣಗಳು ಮತ್ತು 6,334 ಸಾವು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.