ಕಾಬೂಲ್ : ದಕ್ಷಿಣ ಆಫ್ಘನ್ನ ಲಷ್ಕರ್ ಘಾ ಪ್ರದೇಶದ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿದ್ದ ರೈತರ ದಿನಾಚರಣೆ ಕಾರ್ಯಕ್ರಮದ ವೇಳೆ ಬಾಂಬ್ ಸ್ಫೋಟಗೊಂಡಿದೆ.
ಘಟನೆಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಹೆಲ್ಮಾಂಡ್ನ ರಾಜ್ಯಪಾಲ ಮೊಹಮ್ಮದ್ ಯಾಸಿನ್ ಖಾನ್ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ರಾಜ್ಯಪಾಲರ ವಕ್ತಾರ ಓಮರ್ ಜ್ವಾಕ್ ಮಾಹಿತಿ ನೀಡಿದ್ದಾರೆ. ಅಲ್ಲದೆ, 23 ಮಂದಿ ಸಹ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಕಾರ್ಯಕ್ರಮದಲ್ಲಿ 1000 ಕ್ಕೂ ಅಧಿಕ ಜನರು ನೆರೆದಿದ್ದರು. ಗಾಯಗೊಂಡಿರುವ ರಾಜ್ಯಪಾಲರ ಸ್ಥಿತಿಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಕಳೆದ ಗುರುವಾರವಷ್ಟೇ ಸಾಂಪ್ರದಾಯಿಕ ಹೊಸವರ್ಷದ ಸಂದರ್ಭದಲ್ಲಿ ನಡೆದ ಬಾಂಬ್ ದಾಳಿಯಲ್ಲಿ 6 ಮಂದಿ ಮೃತಪಟ್ಟು, 23 ಜನ ಗಾಯಗೊಂಡಿದ್ದರು. ಇಸ್ಲಾಮಿಕ್ ಸ್ಟೇಟ್ ಈ ಕೃತ್ಯ ಎಸಗಿತ್ತು ಎನ್ನಲಾಗಿದೆ. ಕಳೆದ ವರ್ಷ ಇದೇ ದಿನ ಕಾರ್ ಬಾಂಬ್ ಸ್ಫೋಟಿಗೊಂಡು 14 ಮಂದಿ ಸಾವನ್ನಪ್ಪಿದ್ದರು.