ನಾಸಿರಿಯಾ (ಇರಾಕ್): ಇರಾಕ್‌ನ ದಕ್ಷಿಣ ನಗರವಾದ ನಾಸಿರಿಯಾದ ಕೋವಿಡ್ ಆಸ್ಪತ್ರೆಯಲ್ಲಿ ಭಾರಿ ಅವಘಡ ಸಂಭವಿಸಿದೆ. ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ, ಅನೇಕರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ.
-
Commander-in-Chief PM @MAKadhimi chairs an emergency meeting following the fire at Al-Hussein (peace be upon him) Hospital in Dhi Qar province. The meeting agreed to: pic.twitter.com/hQyldmMtMa
— Government of Iraq - الحكومة العراقية (@IraqiGovt) July 12, 2021 " class="align-text-top noRightClick twitterSection" data="
">Commander-in-Chief PM @MAKadhimi chairs an emergency meeting following the fire at Al-Hussein (peace be upon him) Hospital in Dhi Qar province. The meeting agreed to: pic.twitter.com/hQyldmMtMa
— Government of Iraq - الحكومة العراقية (@IraqiGovt) July 12, 2021Commander-in-Chief PM @MAKadhimi chairs an emergency meeting following the fire at Al-Hussein (peace be upon him) Hospital in Dhi Qar province. The meeting agreed to: pic.twitter.com/hQyldmMtMa
— Government of Iraq - الحكومة العراقية (@IraqiGovt) July 12, 2021
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ ಮುಸ್ತಫಾ ಅಲ್-ಕಧಿಮಿ, ಹಿರಿಯ ಸಚಿವರೊಂದಿಗೆ ತುರ್ತು ಸಭೆ ನಡೆಸಿ ನಾಸಿರಿಯಾದಲ್ಲಿ ಆರೋಗ್ಯ ಮತ್ತು ನಾಗರಿಕ ರಕ್ಷಣಾ ವ್ಯವಸ್ಥಾಪಕರನ್ನು ಅಮಾನತುಗೊಳಿಸಿ ಬಂಧಿಸುವಂತೆ ಆದೇಶ ಹೊರಡಿಸಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ಪತ್ರೆಯು ಹೊಗೆಯಿಂದ ಆವರಿಸಿದ್ದು, ವಾರ್ಡ್ಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ದಳ ಜನರ ರಕ್ಷಣೆಗೆ ಮುಂದಾಗಿದ್ದಾರೆ.
ಆಸ್ಪತ್ರೆಯ ಕೋವಿಡ್ 19 ವಾರ್ಡ್‌ಗಳೊಳಗಿನ ಆಮ್ಲಜನಕ ಟ್ಯಾಂಕ್ ಸ್ಫೋಟವೇ ಈ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ಪೊಲೀಸ್ ವರದಿಗಳು ತಿಳಿಸಿವೆ.
ಏಪ್ರಿಲ್ನಲ್ಲಿ ಬಾಗ್ದಾದ್ನ ಕೋವಿಡ್ -19 ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟದಿಂದ ಉಂಟಾದ ಅವಘಡದಲ್ಲಿ ಸುಮಾರು 82 ಜನರು ಸಾವನ್ನಪ್ಪಿದ್ದರು, 110 ಮಂದಿ ಗಾಯಗೊಂಡಿದ್ದರು.
ಇದನ್ನು ಓದಿ: ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟ: ಸಾವಿನ ಸಂಖ್ಯೆ 82ಕ್ಕೆ ಏರಿಕೆ