ETV Bharat / international

ಸೊಮಾಲಿಯಾದ ರಾಜಧಾನಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ; 5 ಮಂದಿ ಸಾವು - Five died and eight wounded in Somalia's Mogadishu

ಸೊಮಾಲಿಯಾದ ರಾಜಧಾನಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದೆ. ಕೃತ್ಯದಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಅಲ್‌-ಖಾಯಿದಾ ಸಂಪರ್ಕದ ಅಲ್‌-ಶಬಾಬ್‌ ಉಗ್ರಗಾಮಿ ಗುಂಪಿನದೇ ಕೃತ್ಯ ಎಂದು ಸೊಮಾಲಿಯಾ ಸರ್ಕಾರ ಆರೋಪಿಸಿದೆ.

5 dead, 8 wounded in suicide bombing in Somalia's capital
ಸಾಂದರ್ಭಿಕ ಚಿತ್ರ
author img

By

Published : Nov 18, 2020, 12:02 AM IST

ಮೊಗಾಡಿಶು (ಸೊಮಾಲಿಯಾ) : ಸೊಮಾಲಿಯಾದ ರಾಜಧಾನಿ ಮೊಗಾಡಿಶು ಪೊಲೀಸ್ ಅಕಾಡೆಮಿ ಬಳಿ ಆತ್ಮಾಹುತಿ ಬಾಂಬ್​ ದಾಳಿ ನಡೆದಿದೆ. ಸ್ಫೋಟದಲ್ಲಿ ಐವರು ಮೃತಪಟ್ಟು ಎಂಟು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಸ್ಫೋಟ ಸಂಭವಿಸಿದ್ದು ಪೊಲೀಸರು ಆಗಾಗ್ಗೆ ಭೇಟಿ ನೀಡಲಾಗುತ್ತಿದ್ದ ಇಲ್ಲಿನ ರೆಸ್ಟೋರೆಂಟ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗಿದೆ ಎಂದು ವಕ್ತಾರ ಸಾದಿಕ್ ಅದಾನ್ ಅಲಿ ಖಚಿತಪಡಿಸಿದ್ದಾರೆ.

ಸೊಮಾಲಿಯಾ ಮೂಲದ ಅಲ್‌-ಖಾಯಿದಾ ಸಂಪರ್ಕದ ಅಲ್‌-ಶಬಾಬ್‌ ಉಗ್ರಗಾಮಿ ಗುಂಪಿನದೇ ಕೃತ್ಯ ಎಂದು ಸೊಮಾಲಿಯಾ ಸರ್ಕಾರ ಆರೋಪಿಸಿದೆ. ಈ ಉಗ್ರಗಾಮಿ ಗುಂಪು ಸೊಮಾಲಿಯಾದ ಮೊಗಾಡಿಶು ಪ್ರದೇಶವನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡಿದೆ.

ಅಲ್ ಖೈದಾಗೆ ನಿಷ್ಠೆ ತೋರಿದ ಅಲ್ ಶಬಾಬ್ ಎಂಬ ಭಯೋತ್ಪಾದಕ ಸಂಘಟನೆಯು ಮೊಗದಿಶುದಲ್ಲಿ ಪದೇ ಪದೇ ದಾಳಿ ನಡೆಸುತ್ತಲೇ ಇದೆ. ಮಧ್ಯ ಮತ್ತು ದಕ್ಷಿಣ ಸೊಮಾಲಿಯಾದ ಕೆಲವು ಭಾಗಗಳಲ್ಲಿ ಈ ಸಂಘಟನೆ ತನ್ನ ನಿಯಂತ್ರಣವನ್ನು ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.