ಬಾಗ್ದಾದ್: ಇರಾಕ್‌ನ ಅತ್ಯಂತ ದೊಡ್ಡ ವಾಯುನೆಲೆ ಸಲಾಹುದ್ದೀನ್ ಪ್ರಾಂತ್ಯದ ಬಾಲಾಡ್ ಮಿಲಿಟರಿ ವಾಯುನೆಲೆ ಬಳಿ ಶನಿವಾರ ಮೂರು ಕತ್ಯುಷಾ ರಾಕೆಟ್ಗಳ ಮೂಲಕ ದಾಳಿ ನಡೆಸಲಾಗಿದ್ದು, ಇರಾಕ್ ನಾಗರಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಭದ್ರತಾ ಮೂಲಗಳು ತಿಳಿಸಿವೆ.
ಇರಾಕ್ ರಾಜಧಾನಿ ಬಾಗ್ದಾದ್‌ನಿಂದ ಉತ್ತರಕ್ಕೆ 90 ಕಿಮೀ ದೂರದಲ್ಲಿರುವ ಬಾಲಾಡ್ ವಾಯುನೆಲೆಯಲ್ಲಿ ಕತ್ಯುಷಾ ರಾಕೆಟ್‌ಗಳಿಂದ ಈ ದಾಳಿ ನಡೆದಿದೆ. ದಾಳಿ ವೇಳೆ ಕಟ್ಟಡವೊಂದಕ್ಕೆ ರಾಕೆಟ್ ಬಡಿದಿದ್ದು, ಕಟ್ಟಡಕ್ಕೆ ಹಾನಿಯಾಗಿದೆ ಮತ್ತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇರಾಕ್‌ನ ವ್ಯಕ್ತಿಯೊಬ್ಬ ದಾಳಿಯಲ್ಲಿ ಗಾಯಗೊಂಡಿದ್ದಾನೆ ಎಂದು ಪ್ರಾಂತೀಯ ಪೊಲೀಸ್ ಮೊಹಮ್ಮದ್ ಅಲ್-ಬಾ ತಿಳಿಸಿದ್ದಾರೆ.
ಇತರ ಎರಡು ರಾಕೆಟ್‌ಗಳಿಂದ ಯಾವುದೇ ಹಾನಿಯಾಗಿಲ್ಲ. ಈವರೆಗೆ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.