ETV Bharat / international

ಮಸೀದಿ ಹೊರಗಡೆ ಗ್ರೆನೇಡ್​ ಸ್ಫೋಟ: 20 ಮಂದಿಗೆ ಗಾಯ - 20 ಮಂದಿಗೆ ಗಾಯ

ಖೈರ್ ಕೋಟ್ ಜಿಲ್ಲೆಯ ಮೊಹಮ್ಮದ್ ಹಸನ್ ಗ್ರಾಮದ ಮಸೀದಿಯಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ರಂಜಾನ್ ಪ್ರಾರ್ಥನೆ ನಡೆಯುತ್ತಿರುವಾಗ ಮಸೀದಿಯ ಹೊರಗೆ ಗ್ರೆನೇಡ್ ಸ್ಫೋಟದಲ್ಲಿ ಇಪ್ಪತ್ತು ನಾಗರಿಕರು ಗಾಯಗೊಂಡಿದ್ದಾರೆ.

Afghan
ಗ್ರೆನೇಡ್​ ಸ್ಪೋಟ
author img

By

Published : May 4, 2020, 1:56 PM IST

ಕಾಬೂಲ್: ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಮಸೀದಿಯ ಹೊರಗೆ ಕೈ ಗ್ರೆನೇಡ್ ಸ್ಫೋಟದಲ್ಲಿ ಇಪ್ಪತ್ತು ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖೈರ್ ಕೋಟ್ ಜಿಲ್ಲೆಯ ಮೊಹಮ್ಮದ್ ಹಸನ್ ಗ್ರಾಮದ ಮಸೀದಿಯಲ್ಲಿ ಭಾನುವಾರ ರಾತ್ರಿ 8 ಗಂಟೆಗೆ ರಂಜಾನ್ ಪ್ರಾರ್ಥನೆ ನಡೆಯುತ್ತಿರುವಾಗ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ ಯಾರಿಗೂ ಮಾರಣಾಂತಿಕ ಗಾಯಗಳಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇನ್ನು ಈ ಘಟನೆಯಲ್ಲಿ ತಾಲಿಬಾನ್ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿದೆ. 2020ರ ಮೊದಲ ಮೂರು ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಯುದ್ಧದಲ್ಲಿ 500 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 760 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಯುಎನ್ ಅಸಿಸ್ಟೆನ್ಸ್ ಮಿಷನ್ ಹೇಳಿದೆ

ತಾಲಿಬಾನ್ ಮತ್ತು ಇತರ ದಂಗೆಕೋರ ಗುಂಪುಗಳಿಂದಾಗಿ ದೇಶದಲ್ಲಿ ಶೇಕಡಾ 55 ರಷ್ಟು ನಾಗರಿಕರ ಸಾವು ನೋವುಗಳಿಗೆ ಕಾರಣವಾಗಿದೆ. ಇದೇ ಅವಧಿಯಲ್ಲಿ 32 ಶೇಕಡಾದಷ್ಟು ಭದ್ರತಾ ಪಡೆಗಳಿಗೂ ತೊಂದರೆ ಉಂಟಾಗಿದೆ ಎಂದು ವಿಶ್ವಸಂಸ್ಥೆಯ ಸಮಿತಿ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.