ರಿಯಾದ್: ಕೊರೊನಾ ಸೋಂಕಿನಿಂದ ಸೌದಿ ಅರೇಬಿಯಾದಲ್ಲಿ ಈ ವರೆಗೆ 11 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಏಪ್ರಿಲ್ 22ರ ವೇಳೆಗೆ ರಾಯಭಾರ ಕಚೇರಿಗೆ ಲಭ್ಯವಿರುವ ಮಾಹಿತಿಯ ಪ್ರಕಾರ, 11 ಭಾರತೀಯ ಪ್ರಜೆಗಳು (ಮದೀನಾದಲ್ಲಿ ನಾಲ್ಕು, ಮಕ್ಕಾದಲ್ಲಿ ಮೂರು, ಜೆಡ್ಡಾದಲ್ಲಿ ಇಬ್ಬರು, ರಿಯಾದ್ನಲ್ಲಿ ಒಬ್ಬರು ಮತ್ತು ದಮ್ಮಮ್ನಲ್ಲಿ ಒಬ್ಬರು) ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ ಎಂದು ಸೌದಿ ಅರೇಬಿಯಾದ ಭಾರತದ ರಾಯಭಾರ ಕಚೇರಿ ತಿಳಿಸಿದೆ.
'ಭಾರತೀಯ ಸಮುದಾಯವು ಶಾಂತವಾಗಿರಬೇಕು ಮತ್ತು ಭೀತಿಯನ್ನು ಉಂಟುಮಾಡುವ ವದಂತಿಗಳನ್ನು ಹರಡಬೇಡಿ' ಎಂದು ರಾಯಭಾರ ಕಚೇರಿ ಒತ್ತಾಯಿಸಿದೆ. 'ಸುಳ್ಳು ಸಂದೇಶಗಳನ್ನು ಕಳುಹಿಸುವುದು ಕೋಮು ದ್ವೇಷವನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ಬಳಸದಿರುವುದು ಬಹಳ ಮುಖ್ಯ' ಎಂದು ರಾಯಭಾರ ಕಚೇರಿ ಹೇಳಿದೆ.
'ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ಕೊರೊನಾ ಸೋಂಕು ತಗುಲುವ ಮೊದಲು ಜನಾಂಗ, ಧರ್ಮ, ಬಣ್ಣ, ಜಾತಿ, ಮತ, ಭಾಷೆ ಅಥವಾ ಗಡಿಗಳನ್ನು ನೋಡುವುದಿಲ್ಲ. ನಾವು ಏಕತೆ ಮತ್ತು ಸಹೋದರತ್ವಕ್ಕೆ ಪ್ರಾಮುಖ್ಯತೆ ನೀಡಬೇಕು' ಎಂದು ಹೇಳಿದೆ.