ETV Bharat / international

ವಾರದ ಬಳಿಕ ಮತ್ತೊಂದು ಕೇಸ್​... 11 ಮಿಲಿಯನ್​ ಜನರ ಕೋವಿಡ್​ ಪರೀಕ್ಷೆಗೆ ಚೀನಾದ ನಿರ್ಧಾರ! - ವುಹಾನ್​ ಸಿಟಿ

ಲಾಕ್​ಡೌನ್​ ಸಂಪೂರ್ಣವಾಗಿ ತೆಗೆದು ಹಾಕಿದ ಮೇಲೆ ಚೀನಾದ ವುಹಾನ್​​ನಲ್ಲಿ ಮತ್ತೊಂದು ಕೋವಿಡ್​​ - 19 ಪ್ರಕರಣ ಕಾಣಿಸಿಕೊಂಡಿದ್ದು, ಅಲ್ಲಿನ ಸರ್ಕಾರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

Wuhan
Wuhan
author img

By

Published : May 12, 2020, 5:06 PM IST

ವುಹಾನ್​(ಚೀನಾ): ಚೀನಾದಲ್ಲಿ ಹುಟ್ಟಿಕೊಂಡು ಅಬ್ಬರಿಸುತ್ತಿರುವ ಕೊರೊನಾ ವೈರಸ್​ ಇದೀಗ ವಾರದ ಬಳಿಕ ಮತ್ತೊಮ್ಮೆ ವುಹಾನ್​​ದಲ್ಲಿ ಕಾಣಿಸಿಕೊಂಡಿದ್ದು, ಹೀಗಾಗಿ ಅಲ್ಲಿರುವ ಎಲ್ಲರಿಗೂ ಕೋವಿಡ್​ ಪರೀಕ್ಷೆ ನಡೆಸಲು ವುಹಾನ್​ ಸಿಟಿ ಆಡಳಿತ ನಿರ್ಧಾರ ಕೈಗೊಂಡಿದೆ.

ಬರೋಬ್ಬರಿ 76 ದಿನಗಳ ಕಾಲ ಲಾಕ್​ಡೌನ್​​​ನಲ್ಲಿದ್ದ ವುಹಾನ್​ ಸಿಟಿ ಏಪ್ರಿಲ್​​ 8ರಂದು ಓಪನ್​ ಆಗಿತ್ತು. ಇದಾದ ಬಳಿಕ ಕಳೆದ ಕೆಲ ದಿನಗಳಿಂದ ಅಲ್ಲಿ ಯಾವುದೇ ಕೇಸ್​ ಕಾಣಿಸಿಕೊಂಡಿರಲಿಲ್ಲ. ಇದೀಗ ಕೋವಿಡ್​ ಹೊಸ ಪ್ರಕರಣ ಕಾಣಿಸಿಕೊಂಡಿದ್ದರಿಂದ ಅಲ್ಲಿನ ಸರ್ಕಾರದ ತಲೆ ಕೆಡಿಸಿದ್ದು, ಹೀಗಾಗಿ ಬರೋಬ್ಬರಿ 11 ಮಿಲಿಯನ್​ ಜನರ ಪರೀಕ್ಷೆ ಮಾಡಲು ನಿರ್ಧರಿಸಿದೆ.

ವುಹಾನ್​ ಸಿಟಿಯಲ್ಲಿ ಕಂಡು ಬಂದಿದ್ದ ಎಲ್ಲ ಕೋವಿಡ್​​ ಸೋಂಕಿತರು ಈಗಾಗಲೇ ಗುಣಮುಖರಾಗಿ ಮನೆಗೆ ತೆರಳಿದ್ದರು. ಇದೀಗ ಮತ್ತೊಂದು ಪ್ರಕರಣ ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ವೃದ್ಧಿಯಾಗುವಂತೆ ಮಾಡಿದೆ. ಸಿಟಿಯಲ್ಲೇ 3 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಚೀನಾದಲ್ಲಿ ಒಟ್ಟು 84,011 ಜನರಿಗೆ ಸೋಂಕು ಹಬ್ಬಿದೆ. ಇದೀಗ ಕೇವಲ 176 ಆ್ಯಕ್ಟೀವ್​ ಕೇಸ್​ಗಳಿವೆ. 4,637 ಜನರು ಈ ಸೋಂಕಿನಿಂದ ಆ ದೇಶದಲ್ಲಿ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.