ಲಂಡನ್: ವಿಕಿಲೀಕ್ಸ್ ಮೂಲಕ ಅಮೆರಿಕ ಸೇರಿದಂತೆ, ವಿಶ್ವದ ಹಲವು ಸರ್ಕಾರಗಳು ಮತ್ತು ರಾಜಕೀಯ ನಾಯಕರ ರಹಸ್ಯ ಕಡತಗಳನ್ನು ಬಿಡುಗಡೆ ಮಾಡಿ ಅವರ ನಿದ್ದೆಗೆಡಿಸಿದ್ದ ಜೂಲಿಯನ್ ಅಸಾಂಜ್ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ.
ಲಂಡನ್‌ನಲ್ಲಿರುವ ಈಕ್ವೆಡಾರ್ ರಾಯಭಾರಿ ಕಚೇರಿಯಲ್ಲಿ ಅಸಾಂಜ್ ಅವರಿಗೆ ಈಕ್ವೆಡಾರ್ ದೇಶ ಆಶ್ರಯ ಒದಗಿಸಿತ್ತು. ಆದರೆ ಈಕ್ವೆಡಾರ್ ಆಶ್ರಯವನ್ನು ಮುಂದುವರಿಸಲು ನಿರಾಕರಿಸಿದ ಮರುಕ್ಷಣವೇ ಬ್ರಿಟಿಷ್ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
2012 ರಿಂದ ಈಕ್ವೆಡಾರ್ ರಾಯಭಾರಿ ಕಚೇರಿಯನ್ನೇ ಮನೆ ಮಾಡಿಕೊಂಡಿದ್ದ ಅಸಾಂಜ್ ಅವರನ್ನು ಬಂಧಿಸಲು ಅಮೆರಿಕ ಶತಾಯಗತಾಯ ಪ್ರಯತ್ನ ನಡೆಸುತ್ತಿತ್ತು.
-
AFP News Agency : British police arrest Wikileaks founder Julian Assange pic.twitter.com/Gry9G3wULw
— ANI (@ANI) April 11, 2019 " class="align-text-top noRightClick twitterSection" data="
">AFP News Agency : British police arrest Wikileaks founder Julian Assange pic.twitter.com/Gry9G3wULw
— ANI (@ANI) April 11, 2019AFP News Agency : British police arrest Wikileaks founder Julian Assange pic.twitter.com/Gry9G3wULw
— ANI (@ANI) April 11, 2019
ಅಸಾಂಜ್, ವಿಕಿಲೀಕ್ಸ್ ಮೂಲಕ 2,50,000 ರಷ್ಟು ಅಮೆರಿಕದ ರಾಜತಾಂತ್ರಿಕ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಿ, ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದರು. ಇರಾಕ್ ಹಾಗೂ ಆಫ್ಘನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಸಂಖ್ಯಾತ ಮಾಹಿತಿಗಳನ್ನು ವಿಕಿಲೀಕ್ಸ್ ಪ್ರಕಟಿಸಿತ್ತು. ಇದರಿಂದ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದು, ಗಲ್ಲು ಶಿಕ್ಷೆಯ ಭೀತಿಗೆ ಒಳಗಾಗಿದ್ದರು.