ಲಂಡನ್: ಕೋವಿಡ್-19 ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಭಿಯಾನವು ಯುರೋಪಿಯನ್ ರಾಷ್ಟ್ರಗಳಲ್ಲಿ ತುಂಬಾ ನಿಧಾನವಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸಾಂಕ್ರಾಮಿಕ ರೋಗದಿಂದ ಹೊರಬರಲು, ಉತ್ತಮವಾದ ಮಾರ್ಗ ಎಂದರೆ ಅದು ಲಸಿಕೆಗಳಿಂದ ಮಾತ್ರ ಸಾಧ್ಯ. ಆದರೆ ಇಲ್ಲಿಯವರೆಗೆ ಯುರೋಪಿನ ಜನಸಂಖ್ಯೆಯ ಕೇವಲ ಶೇ.10 ರಷ್ಟು ಜನ ಮಾತ್ರ ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಕೇವಲ ಶೇ. 4ರಷ್ಟು ಜನ ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ ಎಂದು ಯುರೋಪ್ನ ಡಬ್ಲ್ಯೂಹೆಚ್ಒನ ಪ್ರಾದೇಶಿಕ ನಿರ್ದೇಶಕ ಡಾ. ಹ್ಯಾನ್ಸ್ ಕ್ಲುಗೆ ಹೇಳಿದ್ದಾರೆ.
ಓದಿ:ಕೊರೊನಾ ಲಸಿಕೆ ಕೊರತೆ : ಬ್ರೆಜಿಲ್ ವಿದೇಶಾಂಗ ಸಚಿವ ರಾಜೀನಾಮೆ
ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಮರೆ ಮಾಚಲಾಗುತ್ತಿದೆ. ಇಲ್ಲಿ ಕೇವಲ 5.6 ರಷ್ಟು ಜನರು ಮಾತ್ರ ಮೊದಲ ಲಸಿಕೆ ಪಡೆದಿದ್ದಾರೆ ಎಂದು ಬ್ಲಾಕ್ ಹೇಳುತ್ತದೆ.
ಲಸಿಕೆ ಅಭಿಯಾನವೂ ವೇಗವಾಗಿ ಸಾಗುತ್ತಿಲ್ಲದಿರುವುದರಿಂದ,ಯುರೋಪಿಯನ್ ದೇಶಗಳಲ್ಲಿ ಕೊರೊನಾ ಎರಡನೇ ಅಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿರಬಹುದು ಎಂದು ಹ್ಯಾನ್ಸ್ ಕ್ಲುಗೆ ಹೇಳಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟವರನ್ನು ಹೊರತುಪಡಿಸಿ ಪ್ರತಿ ವಯಸ್ಸಿನವರಲ್ಲೂ ಹೊಸ ಕೋವಿಡ್-19 ಸೋಂಕುಗಳು ಹೆಚ್ಚುತ್ತಿವೆ ಎಂದು WHO ಹೇಳಿದೆ.