ETV Bharat / international

Covid ಮೂಲ ಪತ್ತೆ ಹಚ್ಚಲು China ಸಹಕರಿಸಬೇಕು: ಟೆಡ್ರೊಸ್ ಒತ್ತಾಯ​ - ಚೀನಾ ಕೋವಿಡ್

ಇಡೀ ಜಗತ್ತನೇ ಆತಂಕಕ್ಕೆ ದೂಡಿರುವ ಕೋವಿಡ್​ ಮೂಲ ಪತ್ತೆ ಹಚ್ಚಲು ಚೀನಾ ಸಹಕರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನಮ್​​ ಹೇಳಿದ್ದಾರೆ.

WHO chief
WHO chief
author img

By

Published : Jul 16, 2021, 10:41 AM IST

ಬರ್ಲಿನ್: ಕೋವಿಡ್​ ಮೂಲ ಪತ್ತೆ ಹಚ್ಚುವಾಗ ಚೀನಾ ಪಾರದರ್ಶಕವಾಗಿರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನಮ್​​ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಚೀನಾಗೆ ಪ್ರಯಾಣಿಸಿದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡಕ್ಕೆ ಕೋವಿಡ್ ಮೂಲವನ್ನು ಪತ್ತೆ ಹಚ್ಚುವುದು ಒಂದು ಸವಾಲಾಗಿತ್ತು. ಚೀನಾದ ವುಹಾನ್​ನಲ್ಲಿ ಮೊದಲ ಕೋವಿಡ್​ ಪ್ರಕರಣ ದಾಖಲಾಗಿತ್ತು.

ಕೋವಿಡ್ ಮೂಲ ಪತ್ತೆ ಹಚ್ಚಲು ಚೀನಾ ಪಾರದರ್ಶಕತೆ ಜತೆಗೆ ಮುಕ್ತ ಸಹಕಾರ ನೀಡುವಂತೆ ವಿಶ್ವಸಂಸ್ಥೆ ಒತ್ತಾಯಿಸುತ್ತಿದೆ. ವುಹಾನ್​ನಲ್ಲಿರುವ ಚೀನಾದ ಸರ್ಕಾರಿ ಪ್ರಯೋಗಾಲಯದಿಂದ ವೈರಸ್​ ಹರಡಿರಬಹುದು ಎಂಬುದನ್ನು ತಳ್ಳಿಹಾಕುವುದು ಅಕಾಲಿಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಾನು ಲ್ಯಾಬ್ ಟೆಕ್ನೀಷಿಯನ್, ಇಮ್ಯುನೊಲಾಜಿಸ್ಟ್​​​ ಆಗಿದ್ದೆ. ಅಲ್ಲಿ ನಡೆಯುವ ಅವಘಡಗಳ ಬಗ್ಗೆ ನನಗೆ ಗೊತ್ತಿದೆ ಎಂದಿದ್ದಾರೆ.

ಮೇ ತಿಂಗಳಲ್ಲಿ ಜೋ ಬೈಡನ್​ ವೈರಸ್ ಮೂಲದ ಪತ್ತೆ ಹಚ್ಚಲು ಗುಪ್ತಚರ ಪರಿಶೀಲನೆಗೆ ಆದೇಶಿಸಿದ್ರು. ಕೋವಿಡ್ ಮೂಲವನ್ನು ಲ್ಯಾಬ್​​ಗೆ ಲಿಂಕ್ ಕೊಡುವುದು ರಾಜಕೀಯ ಪ್ರೇರಿತವಾಗಿದೆ. ಇತರ ದೇಶಗಳಲ್ಲೂ ಕೋವಿಡ್ ಏಕಾಏಕಿ ಕಾಣಿಸಿಕೊಳ್ಳುತ್ತಿವೆ ಎಂದು ಟೆಡ್ರೊಸ್ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಬಾವಲಿಗಳಿಂದ ಹುಟ್ಟಿಕೊಂಡಿದೆ ಎಂದು ಅನೇಕ ವಿಜ್ಞಾನಿಗಳು ಶಂಕಿಸಿದ್ದಾರೆ. ಆದರೆ, ಅದು ಮೊದಲಿಗೆ ಪತ್ತೆಯಾಗಿದ್ದು, ಮನುಷ್ಯರಲ್ಲಿ. ಹಾಗಾಗಿ ಇತರ ಪ್ರಾಣಿ-ಪಕ್ಷಿಗಳಿಂದ ಬಂದಿದೆ ಎಂದು ಹೇಳಲಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ:ಕೊಂಚ ತಗ್ಗಿದ ಕೊರೊನಾ ಎಫೆಕ್ಟ್​: ಕಳೆದ 24 ಗಂಟೆಯಲ್ಲಿ 98,949 ಕೇಸ್​ ಪತ್ತೆ

ಎಬೋಲಾ, ಎಸ್​ಆರ್​ಎಸ್​ನಂತರ ವೈರಸ್ ಹರಡುವಿಕೆ ಕಡಿಮೆ ಮಾಡಲು ದಶಕಗಳೇ ಬೇಕಿದ್ದವು. ಚೀನಾ ನಮ್ಮ ಸಂಶೋಧನೆಗೆ ಸಹಕರಿಸಿದರೆ, ಸಂಪೂರ್ಣ ಮಾಹಿತಿ ತಿಳಿಯುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.