ಪ್ಯಾರಿಸ್: ಕೆಥೆಡ್ರಲ್ ನೋಟ್ರೆ ಡಮ್... ಸುಮಾರು 850 ವರ್ಷ ಇತಿಹಾಸ ಇರುವ ಅತ್ಯಂತ ಹಳೆಯ ಚರ್ಚ್. ಫ್ಯಾಷನ್ ನಗರಿ ಎಂದೇ ಕರೆಯಿಸಿಕೊಳ್ಳುವ ಪ್ಯಾರಿಸ್ನ ಲ್ಯಾಂಡ್ ಮಾರ್ಕ್. ಸೋಮವಾರ ಇಂತಹ ಐತಿಹಾಸಿಕ ಹಾಗೂ ಪ್ರಸಿದ್ಧ ಚರ್ಚ್ ಬೆಂಕಿಗಾಹುತಿ ಆಗಿತ್ತು.
ಚರ್ಚ್ಗೆ ಹೊತ್ತಿಕೊಂಡ ಬೆಂಕಿ ನಂದಿಸಲು 400 ಅಗ್ನಿಶಾಮಕ ಸಿಬ್ಬಂದಿ ಹಗಲಿರಳು ಶ್ರಮಿಸಿ, ಇನ್ನುಳಿದ ಭಾಗಕ್ಕೆ ಬೆಂಕಿ ಹರಡದಂತೆ ಹರಸಾಹಸ ಪಡುತ್ತಿದೆ. 12 ಹಾಗೂ 13ನೇ ಶತಮಾನದಲ್ಲಿ ನೋಟ್ರೆ ಡಮ್ ಕೆಥೆಡ್ರೆಲ್ ನಿರ್ಮಾಣ ಮಾಡಲಾಗಿತ್ತು.1160 ಬಿಶಪ್ ಮುರೆಡೆಸುಲ್ಲಿ ಈ ಚರ್ಚ್ ನಿರ್ಮಾಣ ಆರಂಭಿಸಿದ್ದರು.1160 ರಲ್ಲಿ ಆರಂಭವಾದ ಕಟ್ಟಡ ಕಾಮಗಾರಿ ಮರಿದಿದ್ದು 1260 ರಲ್ಲಿ ಅಂದರೆ ಸುಮಾರು 100 ವರ್ಷಗಳ ಕಾಲ ಈ ಪ್ರತಿಷ್ಠಿತ ಚರ್ಚ್ ನಿರ್ಮಾಣ ಮಾಡಲಾಗಿತ್ತು.
ಫ್ರೆಂಚ್ ಕ್ರಾಂತಿ ವೇಳೆ ಈ ಚರ್ಚ್ ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. 1804 ರಲ್ಲಿ ಈ ಚರ್ಚ್ನ ಅಂಗಳ ನೆಪೋಲಿಯನ್ ಬೊನ್ಪಾರ್ಟ್ ಪಟ್ಟಾಭಿಷೇಕಕ್ಕೆ ಸಾಕ್ಷಿ ಆಯಿತು. 19ನೇ ಶತಮಾನದಲ್ಲಿ ಈ ಚರ್ಚ್ನ ಗೋಪುರವನ್ನ ನಿರ್ಮಾಣ ಮಾಡಲಾಗಿತ್ತು.
ಇದರಲ್ಲಿ ಎರಡು ಗೋಪುರಗಳ ಎತ್ತರ 68 ಮೀಟರ್. ಕೆಥೆಡ್ರೆಲ್ ಸುಮಾರು 10 ಅತಿದೊಡ್ಡ ಗಂಟೆಗಳನ್ನ ಹೊಂದಿದೆ. ಇದರಲ್ಲಿ ಇಮ್ಯಾನುವೆಲ್ ಅತ್ಯಂತ ದೊಡ್ಡ ಗಂಟೆ ಎಂಬ ಹಿರಿಮೆ ಹೊಂದಿದೆ. 23 ಟನ್ ಭಾರ ತೂಗುವ ಈ ಗಂಟೆ ಭಾರಿ ಪ್ರಸಿದ್ಧಿಯನ್ನೂ ಪಡೆದಿದೆ.
ಪ್ರತಿವರ್ಷ ಇಲ್ಲಿಗೆ ಸುಮಾರು 13 ಮಿಲಿಯನ್ ಅಂದರೆ 1 ಕೋಟಿ 30 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ.