ಮಾಸ್ಕೋ(ರಷ್ಯಾ): ಉಕ್ರೇನ್ ಸೇನೆ ಶಸ್ತ್ರಾಸ್ತ್ರ ಕೆಳಗಿಳಿಸಿದರೆ ಅದರೊಂದಿಗೆ ಮಾತುಕತೆಗೆ ತಾವು ಸಿದ್ಧವಿರುವುದಾಗಿ ರಷ್ಯಾ ಘೋಷಣೆ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ವಿದೇಶಾಗ ಸಚಿವ ಲಾವ್ ರೋವ್ ಮಾಹಿತಿ ಹಂಚಿಕೊಂಡಿದ್ದಾರೆಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
-
We are ready for talks once Ukraine's Army stops fighting, says Russian Foreign Minister Sergey Lavrov, reports Reuters
— ANI (@ANI) February 25, 2022 " class="align-text-top noRightClick twitterSection" data="
(file photo) pic.twitter.com/Vq4KjeWrNt
">We are ready for talks once Ukraine's Army stops fighting, says Russian Foreign Minister Sergey Lavrov, reports Reuters
— ANI (@ANI) February 25, 2022
(file photo) pic.twitter.com/Vq4KjeWrNtWe are ready for talks once Ukraine's Army stops fighting, says Russian Foreign Minister Sergey Lavrov, reports Reuters
— ANI (@ANI) February 25, 2022
(file photo) pic.twitter.com/Vq4KjeWrNt
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದಾಗಿನಿಂದಲೂ ಉಕ್ರೇನ್ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಈವರೆಗೆ ನೂರಾರು ಸೈನಿಕರು ಹಾಗೂ ಅನೇಕ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ರಷ್ಯಾ ಈ ರೀತಿಯ ಘೋಷಣೆ ಹೊರ ಹಾಕಿದೆ.
ಇದನ್ನೂ ಓದಿರಿ: ಶಸ್ತ್ರಾಸ್ತ್ರ ಕೈಬಿಟ್ಟು ಶರಣಾಗತಿಗೆ ಸೂಚನೆ: ಮಾತು ಕೇಳದ 13 ಉಕ್ರೇನ್ ಯೋಧರ ಹತ್ಯೆ ಮಾಡಿದ ರಷ್ಯಾ
ಉಭಯ ದೇಶಗಳ ನಡುವಿನ ಸಂಘರ್ಷ ಉಲ್ಭಣಗೊಳ್ಳುತ್ತಿದ್ದಂತೆ ಮಾಧ್ಯಮದ ಮುಂದೆ ಬಂದು ಮಾತನಾಡಿರುವ ವಿದೇಶಾಂಗ ಸಚಿವ ಲಾವ್ ರೋಮ್, ಉದ್ವಿಗ್ನತೆ ಶಮನಗೊಳಿಸಲು ತಾವು ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಉಕ್ರೇನ್ ಶಸ್ತ್ರಾಸ್ತ್ರ ಕೆಳಗಿಳಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.
ಉಕ್ರೇನ್ನಲ್ಲಿರುವ ಸರ್ಕಾರ ಪ್ರಜಾಸತ್ತಾತ್ಮಕ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉಕ್ರೇನ್ ಮೇಲೆ ದಾಳಿ ನಡೆಸಿ, ಅದನ್ನ ಆಕ್ರಮಣ ಮಾಡಿಕೊಳ್ಳುವ ಉದ್ದೇಶ ನಮಗಿಲ್ಲ. ಆದರೆ ಅಲ್ಲಿನ ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಮುಂದಾಗಿದ್ದೇವೆ ಎಂದಿದ್ದಾರೆ.