ಮಾನವ ತಾನು ಬದುಕಲು ಪರಿಸರಕ್ಕೆ ಹೊಂದಿಕೊಳ್ಳುತ್ತಾನೆ ಅಥವಾ ಪರಿಸರವನ್ನು ತನಗೆ ಬೇಕಾದ ಹಾಗೆ ಹೊಂದಿಸಿಕೊಳ್ಳುತ್ತಾನೆ. ಅಂದರೆ ಎಂಥಹ ಪರಿಸ್ಥಿತಿಯಲ್ಲೂ ಕೂಡಾ ಮಾನವನಿಗೆ ಬದುಕಲು ಒಂದು ಮಾರ್ಗ ಇದ್ದೇ ಇರುತ್ತದೆ. ಆಹಾರ ಹೊಂದಿಸಿಕೊಳ್ಳುವ ವಿಚಾರದಲ್ಲೂ ಅಷ್ಟೇ.. ಬಹುತೇಕ ಕಠಿಣ ಪರಿಸ್ಥಿತಿಗಳಲ್ಲಿ ತನಗೆ ಬೇಕಾದ ಆಹಾರವನ್ನು ತಾನು ತಯಾರಿಸಿಕೊಳ್ಳುತ್ತಾನೆ.
ಅಂದಹಾಗೆ, ಆಹಾರ ತಯಾರಿಸಿಕೊಳ್ಳುವ ವಿಧಾನ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ. ಒಮ್ಮೊಮ್ಮೆ ನಮಗೆ ಧ್ರುವ ಪ್ರದೇಶಗಳಲ್ಲಿ ಅಥವಾ ಕನಿಷ್ಠ ತಾಪಮಾನ ಇರುವ ಪ್ರದೇಶಗಳಲ್ಲಿ ಯಾವ ರೀತಿ ಅಡುಗೆ ಮಾಡಿಕೊಳ್ಳುತ್ತಾರೆ ಎಂಬ ಅನುಮಾನ ಕಾಡುತ್ತದೆ. ಆದರೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
" class="align-text-top noRightClick twitterSection" data="
">
earthpix ಎಂಬ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, ರಷ್ಯಾದ ಪೂರ್ವದಲ್ಲಿ ಆರ್ಕ್ಟಿಕ್ ಮಹಾಸಾಗರದ ಸಮೀಪದಲ್ಲಿ ಯಾಕುಟಿಯಾ ಪ್ರದೇಶವಿದ್ದು, ಇಲ್ಲಿ ತಾಪಮಾನ ಯಾವಾಗಲೂ ಕಡಿಮೆ ಇರುತ್ತದೆ. ಚಳಿಗಾಲದಲ್ಲಿ ಒಮ್ಮೊಮ್ಮೆ ಮೈನಸ್ 50 ಡಿಗ್ರಿಗೆ ತಾಪಮಾನ ಇಳಿಯುತ್ತದೆ. ಇಲ್ಲಿ ಮಾಂಸ ಸೇರಿದಂತೆ ಇತರ ಆಹಾರ ಪದಾರ್ಥಗಳು ಶೀಘ್ರದಲ್ಲೇ ಗಟ್ಟಿಯಾಗುತ್ತವೆ. ಇಂಥಹ ಸ್ಥಳದಲ್ಲಿ ವ್ಯಕ್ತಿಯೋರ್ವ ಆಹಾರ ತಯಾರಿಸಿದ್ದಾನೆ.
ಮನೆಯ ಹೊರಗೆ ಅಡುಗೆ ಮಾಡುವ ಈತ, ನೀರಿಗಾಗಿ ಮಂಜುಗಡ್ಡೆ ಬಳಸಿದ್ದಾನೆ. ಸಂಪೂರ್ಣವಾಗಿ ಹೆಪ್ಪುಗಟ್ಟಿದ ತರಕಾರಿಗಳನ್ನು ಪಾತ್ರೆಯೊಳಗೆ ಎಸೆಯುವ ಆತ, ಮುಚ್ಚಿದ ಒಲೆಯ ಮೇಲಿಟ್ಟು ಆಹಾರವನ್ನು ಬೇಯಿಸುತ್ತಾನೆ. ಸ್ವಲ್ಪ ಸಮಯದ ನಂತರ ಆಹಾರ ಸಿದ್ಧವಾಗಿರುತ್ತದೆ. ಮೇಲ್ನೋಟಕ್ಕೆ ಇದು ತುಂಬಾ ಸರಳ ಎನಿಸಿದರೂ, ವಾತಾವರಣವನ್ನು ಗಣನೆಗೆ ತೆಗೆದುಕೊಂಡಾಗ ಈ ರೀತಿಯ ಅಡುಗೆ ಸಿದ್ಧಪಡಿಸುವುದು ನಮಗೆ ಅಸಾಧ್ಯ ಎಂಬಂತೆ ತೋರುತ್ತದೆ.
ಈ ವಿಡಿಯೋವನ್ನು ಈಗಾಗಲೇ 29 ಮಿಲಿಯನ್ ಮಂದಿ ವೀಕ್ಷಿಸಿದ್ದರೆ, 1.7 ಮಿಲಿಯನ್ ಮಂದಿ ಲೈಕ್ ಮಾಡಿದ್ದಾರೆ. ಅದರ ಜೊತೆಗೆ ಕಮೆಂಟ್ಗಳಲ್ಲಿ ವ್ಯಕ್ತಿಯ ಪ್ರಯತ್ನವನ್ನು ಮೆಚ್ಚಿದ್ದಾರೆ.