ETV Bharat / international

ರಷ್ಯಾ ಚುನಾವಣೆಗೆ ಮತದಾನ ಆರಂಭ: ಮತ್ತೆ ಅಧ್ಯಕ್ಷರಾಗ್ತಾರಾ ಪುಟಿನ್​? - ಯುನೈಟೆಡ್​ ರಷ್ಯಾ

ರಷ್ಯಾದಲ್ಲಿ ಸಂಸತ್ ಚುನಾವಣೆಗೆ ಮತದಾನ ಆರಂಭವಾಗಿದ್ದು, ವ್ಲಾಡಿಮಿರ್ ಪುಟಿನ್ ಅವರು ಅಧ್ಯಕ್ಷರಾಗಿ ಐದನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಆನ್​ಲೈನ್​ ಸಮೀಕ್ಷೆಯೊಂದರ ಪ್ರಕಾರ ಪುಟಿನ್​ರ ಯುನೈಟೆಡ್​ ರಷ್ಯಾ ಪಕ್ಷವು ಬಹುಮತ ಗಳಿಸುವಲ್ಲಿ ವಿಫಲವಾಗಲಿದೆ ಎಂದು ಹೇಳಲಾಗಿದೆ.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಅಧ್ಯಕ್ಷ ವ್ಲಾಡಿಮಿರ್ ಪುಟಿನ್
author img

By

Published : Sep 17, 2021, 7:24 AM IST

Updated : Sep 17, 2021, 8:23 AM IST

ಮಾಸ್ಕೋ (ರಷ್ಯಾ): ಇಂದಿನಿಂದ ರಷ್ಯಾದಲ್ಲಿ ಸಂಸತ್ ಚುನಾವಣೆ ನಡೆಯಲಿದ್ದು, ಮತದಾನ ಆರಂಭಗೊಂಡಿದೆ. ರಾಜಧಾನಿ ಮಾಸ್ಕೋಗಿಂತಲೂ ಒಂಬತ್ತು ಗಂಟೆಗಳ ಮುಂಚಿತವಾಗಿ ದೂರದ ಪೂರ್ವ ಪ್ರದೇಶಗಳಾದ ಕಮ್ಚಟ್ಕಾ ಮತ್ತು ಚುಕೊಟ್ಕಾದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. .

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪಕ್ಷ ರಷ್ಯಾ ಸಂಸತ್​​ನ ಕೆಳಮನೆ ಡೂಮಾಕ್ಕೆ ಚುನಾವಣೆ ನಡೆಯುತ್ತಿದೆ. ಪ್ರತಿಸ್ಪರ್ಧಿಯಾಗಿ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಪಕ್ಷ ಪ್ರಬಲ ಪೈಪೋಟಿ ನೀಡುತ್ತಿದೆ. ಈಗಾಗಲೇ ನಾಲ್ಕು ಬಾರಿ ಅಧ್ಯಕ್ಷರಾಗಿ ರಷ್ಯಾವನ್ನು ಆಳಿರುವ ಪುಟಿನ್​, ತಮ್ಮ ಪಕ್ಷ ಮತ್ತೆ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಪುಟಿನ್​ ಅವರು 2000-2004, 2004-2008, 2012- 2018 ಮತ್ತು 2018ರ ಮೇ ತಿಂಗಳಿನಿಂದ ಇಲ್ಲಿಯವರೆಗೆ ರಷ್ಯಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈಗ ಐದನೇ ಬಾರಿ ಅಧ್ಯಕ್ಷರಾಗಿ ಆಯ್ಕೆ ಆಗಲು ಈಗಿನ ಕಾನೂನಿನಂತೆ ಪುಟಿನ್​ಗೆ ಅವಕಾಶ ಇಲ್ಲ. ಹಾಗಾಗಿ ವ್ಲಾಡಿಮಿರ್​ ಪುಟಿನ್​ ಅಧ್ಯಕ್ಷರಾಗಿ ಮುಂದುವರೆಯಲು ಸಂವಿಧಾನ ತಿದ್ದುಪಡಿಗೆ ಮುಂದಾಗಿದ್ದಾರೆ. ಪ್ರಸ್ತುತ ರಷ್ಯಾ ಸಂಸತ್​ನ ಕೆಳಮನೆ ಡುಮಾದಲ್ಲಿ ಪುಟಿನ್​​​ರ ಯುನೈಟೆಡ್​​​ ರಷ್ಯಾ ಪಕ್ಷ 3ನೇ 2ರಷ್ಟು ಬಹುಮತ ಹೊಂದಿದೆ.

2020ರಲ್ಲೇ ನಡೆಯಬೇಕಿದ್ದ ಚುನಾವಣೆ

ರಷ್ಯಾ ಸಂಸತ್ತಿನ ಕೆಳಮನೆಯಾದ 'ಡುಮಾ'ದ 450 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಇದಾಗಿದೆ. 2020ರ ಸೆಪ್ಟೆಂಬರ್​ನಲ್ಲೇ ನಡೆಯ ಬೇಕಿದ್ದ ಚುನಾವಣೆ ಕೋವಿಡ್​ನಿಂದಾಗಿ ಮುಂದೂಡಲ್ಪಟ್ಟಿತ್ತು. ರಷ್ಯಾ ಸಂವಿಧಾನದ ಪ್ರಕಾರ ಒಬ್ಬನೇ ವ್ಯಕ್ತಿ ಐದು ಬಾರಿ ಅಧ್ಯಕ್ಷ ಗಾದಿಗೆ ಏರುವಂತಿಲ್ಲ. ಒಂದು ವೇಳೆ 2/3 ಬಹುಮತ ಬಂದರೂ ಸಂವಿಧಾನ ತಿದ್ದುಪಡಿ ಮಸೂದೆಗೆ ಡುಮಾದ ಸಮ್ಮತಿ ದೊರೆಯಬೇಕು.

ಸಂಸತ್​ನಲ್ಲಿ ಬೇಕಿದೆ ಭಾರಿ ಬಹುಮತ

ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾದರೆ ಈ ಬಾರಿಯೂ 3ನೇ 2 ರಷ್ಟು ಬಹುಮತವನ್ನ ಪಡೆಯಬೇಕಾದ ಅವಶ್ಯಕತೆ ಪುಟಿನ್​ ಅವರ ಪಕ್ಷಕ್ಕೆ ಇದೆ. ಹೀಗಾಗಿ ಈ ಚುನಾವಣೆ ಭಾರಿ ಮಹತ್ವ ಪಡೆದುಕೊಂಡಿದೆ. ಆದರೆ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪುಟಿನ್​ ಪಕ್ಷಕ್ಕೆ ಭಾರಿ ಹಿನ್ನಡೆ ಆಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಷ್ಯಾದಲ್ಲಿ ಭಾರತದ ಮಿಲಿಟರಿ ಸಾಮರ್ಥ್ಯ ಅನಾವರಣ... ಜಪಾಡ್‌ 2021 ಸಮರಾಭ್ಯಾಸ: ಪುಟಿನ್ ಭಾಗಿ

ಇಂದಿನಿಂದ ಸೆಪ್ಟೆಂಬರ್ 19ರ ವರೆಗೆ ಮೂರು ದಿನಗಳ ಕಾಲ ಚುನಾವಣೆ ನಡೆಯಲಿದ್ದು, ಅಲೆಕ್ಸಿ ನವಾಲ್ನಿ ಅವರು ಸ್ಮಾರ್ಟ್ ವೋಟಿಂಗ್​ ತಂತ್ರಾಂಶವನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ, ಈ ತಂತ್ರಾಂಶವನ್ನು ಡಿಲೀಟ್​ ಮಾಡುವಂತೆ ಗೂಗಲ್​ ಮತ್ತು ಆಪಲ್​ ಕಂಪನಿಗಳಿಗೆ ರಷ್ಯಾ ವಿದೇಶಾಂಗ ಸಚಿವಾಲಯ ಸೂಚಿಸಿದೆ.

Last Updated : Sep 17, 2021, 8:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.