ರೋಮ್: ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿದ ಅಧ್ಯಯನವು 2019ರ ಡಿಸೆಂಬರ್‌ನಲ್ಲಿ ರೋಮ್ನ ಉತ್ತರ ನಗರಗಳಾದ ಮಿಲನ್ ಮತ್ತು ಟುರಿನ್‌ಗಳ ಕಲುಷಿತ ನೀರಿನಲ್ಲಿ ಹೊಸ ಬಗೆಯ ಕೊರೊನಾ ವೈರಸ್ ಕಂಡುಬಂದಿದೆ ಎಂದು ಕಂಡುಹಿಡಿದಿದೆ.
ಉತ್ತರ ಇಟಲಿಯ ಒಳಚರಂಡಿ ಸಂಸ್ಕರಣಾ ಘಟಕಗಳಿಂದ ಅಕ್ಟೋಬರ್ 2019 ರಿಂದ ಫೆಬ್ರವರಿ 2020ರವರೆಗೆ ಸಂಗ್ರಹಿಸಲಾದ 40 ನೀರಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿ ಈ ಅಂಶವನ್ನು ತಿಳಿಸಿದೆ. ಮೊದಲು ತ್ಯಾಜ್ಯ ತುಂಬಿದ ನೀರಿನಲ್ಲಿ ಕಂಡುಬಂದಿದ್ದ ವೈರಸ್, ನಂತರ ಸ್ಥಳೀಯ ಜನರಿಗೆ ಹರಡಿದೆ ಎಂದು ದೃಢೀಕರಿಸಿದೆ.
ಡಿಸೆಂಬರ್ 18 ರಲ್ಲಿ ಮಿಲನ್ ಮತ್ತು ಟುರಿನ್ ನಗರಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ COVID-19 ಗೆ ಕಾರಣವಾಗುವ ವೈರಸ್ ಕಂಡುಬಂದಿದೆ. ಆದರೆ ಡಿಸೆಂಬರ್ಗೂ ಹಿಂದೆ ಸಂಗ್ರಹಿಸಿದ ಮಾದರಿಗಳಲ್ಲಿ ಕೋವಿಡ್ ರೀತಿಯ ಯಾವುದೇ ವೈರಸ್ ಕಂಡುಬಂದಿಲ್ಲ. ಇನ್ನು ಮುಂಜಾಗ್ರತ ಕ್ರಮವಾಗಿ ಮುಂದಿನ ತಿಂಗಳಿನಿಂದ ಇಟಲಿಯ ಪ್ರವಾಸಿ ತಾಣಗಳಲ್ಲಿ ಈ ಬಗೆಯ ಸಂಶೋಧನೆ ನಡೆಸುವುದಾಗಿ ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಹೇಳಿದೆ.