ಪ್ಯಾರೀಸ್: ನೂತನ ರಾಷ್ಟ್ರೀಯ ಭದ್ರತಾ ಕಾಯ್ದೆಯ ವಿರುದ್ಧ ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕಕ್ಕೆ ತಿರುಗಿದ್ದು, 37 ಮಂದಿ ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ ಎಂದು ಗೃಹ ಸಚಿವ ಗೆರಾಲ್ಡ್ ಡರ್ಮನಿನ್ ತಿಳಿಸಿದ್ದಾರೆ.
ಫ್ರಾಥಮಿಕ ಮಾಹಿತಿಯ ಪ್ರಕಾರ , 37 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ರಕ್ಷಣ ಕಾನೂನು ಜಾರಿ ವಿರುದ್ಧ ಸ್ವೀಕಾರಾರ್ಹವಲ್ಲದೆ ಇಂತಹ ಹಿಂಸಾತ್ಮಕ ಕೃತ್ಯಗಳನ್ನು ನಾನು ಖಂಡಿಸುತ್ತೇನೆ ಎಂದು ಡರ್ಮನಿನ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
-
France is mad and they're going hard.
— Griffin - Live Protest News (@GriffinMalone6) November 28, 2020 " class="align-text-top noRightClick twitterSection" data="
🎥@gregoire_mandypic.twitter.com/KyuG5vxIho
">France is mad and they're going hard.
— Griffin - Live Protest News (@GriffinMalone6) November 28, 2020
🎥@gregoire_mandypic.twitter.com/KyuG5vxIhoFrance is mad and they're going hard.
— Griffin - Live Protest News (@GriffinMalone6) November 28, 2020
🎥@gregoire_mandypic.twitter.com/KyuG5vxIho
ಮಿಲಿಟರಿ ಅಧಿಕಾರಿಗಳು ಮತ್ತು ಪೊಲೀಸರ ವಿಡಿಯೋಗಳ ಹಾಗೂ ಚಿತ್ರಗಳನ್ನು ಪ್ರದರ್ಶಿಸುವುದನ್ನ ಅಪರಾಧೀಕರಿಸುವ ಹೊಸ ಕರಡು ಕಾನೂನನ್ನು ಜಾರಿಗೆ ತಂದಿರುವುದರ ವಿರುದ್ಧ ಪ್ರಾನ್ಸ್ನಲ್ಲಿ, ಹೆಚ್ಚು ಪ್ಯಾರೀಸ್ನಲ್ಲಿ ಪತ್ರಕರ್ತರು, ನಾಗರೀಕರು ಹಾಗೂ ಎನ್ಜಿಒಗಳು ಪ್ರತಿಭಟನೆ ನಡೆಸುತ್ತಿವೆ. ಇಲ್ಲಿ ನಡೆದ ರ್ಯಾಲಿಗಳ ಸಂದರ್ಭದಲ್ಲಿ ಪೊಲೀಸರೊಂದಿಗೆ ಘರ್ಷಣೆಗಳು ನಡೆದಿದ್ದರಿಂದ ಹಿಂಸಾತ್ಮಕತೆಗೆ ದಾರಿ ಮಾಡಿಕೊಟ್ಟಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿಮಾಡಿವೆ.
ಈ ಕಾಯ್ದೆಯ ಅನ್ವಯ ಕರ್ತವ್ಯ ನಿರತ ಪೊಲೀಸರ ವಿಡಿಯೋಗಳನ್ನು ಮಾಡುವುದು, ಫೋಟೋಗಳನ್ನು ಶೇರ್ ಮಾಡುವುದು ಅಪರಾಧವಾಗಲಿದೆ. ಇದನ್ನು ಉಲ್ಲಂಘಿಸಿದರೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 45 ಸಾವಿರ ಯೂರೋಗಳನ್ನು ದಂಡವಾಗಿ ಕಟ್ಟಬೇಕಿದೆ.