ಗ್ಲಾಸ್ಗೋ : ಜಾಗತಿಕ ಸಮಸ್ಯೆಯಾಗಿರುವ ತಾಪಮಾನ ಏರಿಕೆ ಕುರಿತ ಸಮ್ಮೇಳನದಲ್ಲಿ ವಿಶ್ವದ ದಿಗ್ಗಜ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ವಿಶ್ವದ ಪ್ರಮುಖ ನಾಯಕರು ಹವಾಮಾನ ವೈಪರೀತ್ಯ ಕುರಿತ ಭಾಷಣ ಮಾಡಿದ್ದು, ಭಾರತವೂ ಸಹ ಇಲ್ಲಿ ತನ್ನ ನಿಲುವು ಪ್ರಸ್ತಾಪಿಸಿದೆ.
ಆದರೆ, ವಿಶ್ವನಾಯಕರ ಭಾಷಣ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿದ್ರೆಗೆ ಜಾರಿರುವುದು ಸೆರೆಯಾಗಿದೆ. ಕಾಪ್ 26 ಶೃಂಗಸಭೆಯ ಭಾಷಣದ ವೇಳೆ ಬೈಡನ್ ದೀರ್ಘ ಸಮಯ ನಿದ್ರೆಗೆ ಜಾರಿದ್ದರು. ನಿಗದಿತ ಆಸನದಲ್ಲಿ ಮಾಸ್ಕ್ ಧರಿಸಿ ಕುಳಿತಿದ್ದ ಅವರು, ಕುಳಿತಲ್ಲಿಯೇ ನಿದ್ರೆಗೆ ಜಾರಿದ್ದರು.
-
Biden appears to fall asleep during COP26 opening speeches pic.twitter.com/az8NZTWanI
— Zach Purser Brown (@zachjourno) November 1, 2021 " class="align-text-top noRightClick twitterSection" data="
">Biden appears to fall asleep during COP26 opening speeches pic.twitter.com/az8NZTWanI
— Zach Purser Brown (@zachjourno) November 1, 2021Biden appears to fall asleep during COP26 opening speeches pic.twitter.com/az8NZTWanI
— Zach Purser Brown (@zachjourno) November 1, 2021
ಆದರೆ, ಈ ವೇಳೆ ಅಧಿಕಾರಿಯೊಬ್ಬರು ಏನನ್ನೋ ವಿಚಾರಿಸುವ ಸಲುವಾಗಿ ಅವರ ಹಿಂಬದಿಯಿಂದ ಬಂದು ಎಚ್ಚರಿಸಿದರು. ಜೋ ಬೈಡನ್ ತೂಕಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ- ವಿರೋಧ ಚರ್ಚೆಗಳು ಆರಂಭವಾಗಿದೆ.
ಕೆಲವರು ದಿನವಿಡಿ ಮೋಜಿಗಾಗಿ ಪ್ರವಾಸಕೈಗೊಂಡು ಆಮೇಲೆ ನಿದ್ರಿಸುತ್ತಾರೆ ಎಂದೆಲ್ಲಾ ಟೀಕೆ ಮಾಡಿದ್ದರೆ. ಇನ್ನೂ ಕೆಲವರು ನಿರಂತರ ಪ್ರವಾಸ ಹಾಗೂ ಅವರ ವಯಸ್ಸಿನಲ್ಲಿ ಸುಸ್ತಾಗಿ ತೂಕಡಿಕೆ ಬರುವುದು ಸಾಮಾನ್ಯ ಎನ್ನುತ್ತಿದ್ದಾರೆ.