ಬೆಲಾರಸ್: ಕಳೆದ ಐದು ದಿನಗಳಿಂದ ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದು, ಇದರ ಮಧ್ಯೆ ಇಂದು ಉಭಯ ದೇಶಗಳ ಮಧ್ಯೆ ಬೆಲಾರಸ್ನಲ್ಲಿ ಮಹತ್ವದ ಶಾಂತಿ ಮಾತುಕತೆ ಆರಂಭಗೊಂಡಿದೆ. ಇದರಲ್ಲಿ ಖುದ್ದಾಗಿ ಉಕ್ರೇನ್ ದೇಶದ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ. ನಿನ್ನೆ ಕೂಡ ಗೋಮೆಲ್ ಪ್ರದೇಶದಲ್ಲಿ ಉಭಯ ದೇಶಗಳ ಮಧ್ಯೆ ಶಾಂತಿ ಮಾತುಕತೆ ನಡೆದಿತ್ತು.
ಬೆಲಾರಸ್ನಲ್ಲಿ ರಷ್ಯಾ- ಉಕ್ರೇನ್ ನಿಯೋಗದ ಮಧ್ಯೆ ಮಹತ್ವದ ಶಾಂತಿ ಮಾತುಕತೆ ಆರಂಭಗೊಂಡಿದ್ದು, ಯುದ್ಧ ಆರಂಭದ ಬಳಿಕ ನಡೆಯುತ್ತಿರುವ ಎರಡನೇ ಸುತ್ತಿನ ಮಾತುಕತೆ ಇದಾಗಿದೆ. ಇದರ ಬೆನ್ನಲ್ಲೇ ಕದನ ವಿರಾಮ ಘೋಷಣೆ ಮಾಡುವಂತೆ ಉಕ್ರೇನ್ ಒತ್ತಾಯ ಮಾಡಿದ್ದಾಗಿ ತಿಳಿದು ಬಂದಿದೆ.
-
#UkraineRussiaCrisis "Russia-Ukraine talks begin in Belarus, between high-level delegations from the two countries; aimed at ending hostilities between the two countries," reports Russia's RT
— ANI (@ANI) February 28, 2022 " class="align-text-top noRightClick twitterSection" data="
">#UkraineRussiaCrisis "Russia-Ukraine talks begin in Belarus, between high-level delegations from the two countries; aimed at ending hostilities between the two countries," reports Russia's RT
— ANI (@ANI) February 28, 2022#UkraineRussiaCrisis "Russia-Ukraine talks begin in Belarus, between high-level delegations from the two countries; aimed at ending hostilities between the two countries," reports Russia's RT
— ANI (@ANI) February 28, 2022
5 ಸಾವಿರ ರಷ್ಯಾ ಯೋಧರ ಹತ್ಯೆ?: ಕಳೆದ ಐದು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾದ 5 ಸಾವಿರ ಯೋಧರು ಸಾವನ್ನಪ್ಪಿದ್ದಾರೆಂದು ಉಕ್ರೇನ್ ಮಾಹಿತಿ ನೀಡಿದ್ದಾಗಿ ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ಜೊತೆಗೆ 191 ಟ್ಯಾಂಕರ್, 29 ಫೈಟರ್ ಜೆಟ್, 29 ಹೆಲಿಕಾಪ್ಟರ್ ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಸೇನಾ ಅನುಭವ ಇರುವ ಕೈದಿಗಳ ಬಿಡುಗಡೆ ಉಕ್ರೇನ್ ನಿರ್ಧಾರ: ರಷ್ಯಾ ವಿರುದ್ಧ ಭೀಕರ ಯುದ್ಧ ಆರಂಭಗೊಂಡಿರುವ ಕಾರಣ ಇದೀಗ ಉಕ್ರೇನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೋರಾಟದಲ್ಲಿ ಭಾಗಿಯಾಗಲು ಸೇನಾ ಅನುಭವ ಹೊಂದಿರುವ ಕೈದಿಗಳನ್ನ ರಿಲೀಸ್ ಮಾಡಲಾಗುವುದು ಎಂದು ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿರಿ: ಮುಂದಿನ 24 ಗಂಟೆ ನಮಗೆ ನಿರ್ಣಾಯಕ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್