ETV Bharat / international

'ನಮ್ಮ ಭೂಮಿ, ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ..' ಉಕ್ರೇನ್​​ ಅಧ್ಯಕ್ಷರಿಗೆ ಯುರೋಪಿಯನ್​ ಸಂಸತ್ ​​ಬೆಂಬಲ - ರಷ್ಯಾ ಉಕ್ರೇನ್ ಸಂಘರ್ಷ

ರಷ್ಯಾ ದಾಳಿಗೆ ತಿರುಗೇಟು ನೀಡುತ್ತಿರುವ ಉಕ್ರೇನ್​ ದೇಶ​ ತನ್ನ ಹೋರಾಟ ಮುಂದುವರೆಸಿದ್ದು, ಇದರ ಮಧ್ಯೆ ಯುರೋಪಿಯನ್​ ಪಾರ್ಲಿಮೆಂಟ್​​ ಉದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ, ನಮ್ಮ ಭೂಮಿ ಮತ್ತು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

Ukraine President Volodymyr Zelenskyy
Ukraine President Volodymyr Zelenskyy
author img

By

Published : Mar 1, 2022, 7:19 PM IST

ಕೀವ್​​(ಉಕ್ರೇನ್​​): ತನ್ನ​ ಮೇಲೆ ಭೀಕರ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ವಿರುದ್ಧ ಉಕ್ರೇನ್​ ಕಳೆದ ಆರು ದಿನಗಳಿಂದ ಕೆಚ್ಚೆದೆಯಿಂದ ಹೋರಾಡುತ್ತಿದ್ದು, ಇಲ್ಲಿಯವರೆಗೆ ತೀವ್ರ ಪೈಪೋಟಿ ನೀಡುತ್ತಾ ಬಂದಿದೆ. ಮೇಲಿಂದ ಮೇಲೆ ಅಲ್ಲಿನ ಯೋಧರು, ನಾಗರಿಕರಿಗೆ ಧೈರ್ಯ ತುಂಬುತ್ತಿರುವ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಇಂದು ಯುರೋಪಿಯನ್ ಪಾರ್ಲಿಮೆಂಟ್​​​ನಲ್ಲಿ ವರ್ಚುವಲ್​​ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಹತ್ವದ ಭಾಷಣ ಮಾಡಿದರು.

ಉಕ್ರೇನ್​​ ಅಧ್ಯಕ್ಷರ ಮಾತಿಗೆ ಯುರೋಪಿಯನ್​ ಸಂಸತ್​​ನಲ್ಲಿ ಎದ್ದು ನಿಂತು ಬೆಂಬಲ ಸೂಚಿಸಿದ ಸಂಸತ್‌ ಸದಸ್ಯರು

ನಾವು ಯುರೋಪಿಯನ್ ಪಾರ್ಲಿಮೆಂಟ್​​ನಲ್ಲಿ ಸಾಮಾನ್ಯ ಸದಸ್ಯರಾಗಲು ಹೋರಾಟ ಮುಂದುವರೆಸಿದ್ದು, ಯುರೋಪಿಯನ್​ ಒಕ್ಕೂಟ ಇಲ್ಲದಿದ್ದರೆ ಉಕ್ರೇನ್​ ಏಕಾಂಗಿಯಾಗಲಿದೆ. ನೀವು ನಮ್ಮೊಂದಿಗಿದ್ದೀರಿ ಎಂಬ ಭರವಸೆ ಇದೆ ಎಂದಿದ್ದಾರೆ. ಇವರ ಭಾಷಣ ಕೇಳಿದ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದರು.

ನಮ್ಮ ಭೂಮಿ ಮತ್ತು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ ಎಂದಿರುವ ವೊಲೊಡಿಮಿರ್​, ನಮ್ಮ ಎಲ್ಲ ನಗರಗಳ ಮೇಲೆ ರಷ್ಯಾ ದಾಳಿ ನಡೆಸಿದ್ದು, ನಮ್ಮನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾವು ಬಲಶಾಲಿಯಾಗಿದ್ದೇವೆ ಎಂದರು. ಇದೇ ವೇಳೆ ರಷ್ಯಾ ನಡೆಸುತ್ತಿರುವ ಶೆಲ್​ ದಾಳಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಇದೊಂದು ಯುದ್ಧ ಅಪರಾಧ ಎಂದಿದ್ದಾರೆ. ಈವರೆಗೆ ಏಕಾಂಗಿಯಾಗಿದ್ದೇವೆಂದು ಅಂದುಕೊಂಡಿದ್ದೆವು. ಉಕ್ರೇನ್‌ಗೆ ಯುಇ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಯುಇ ಪಾರ್ಲಿಮೆಂಟ್‌ನಲ್ಲಿ ಉಕ್ರೇನ್ ಅಧ್ಯಕ್ಷ ಭಾಷಣ

ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳಿಂದ ನಾವು ತೆಗೆದುಕೊಂಡಿರುವ ಉಕ್ರೇನ್​ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.