ETV Bharat / international

ರಷ್ಯಾ ದಾಳಿ ಖಂಡಿಸಿ ಉಕ್ರೇನ್ ಅಧ್ಯಕ್ಷರ ಭಾವನಾತ್ಮಕ ಭಾಷಣ - ukraine president emotional speech

ಉಕ್ರೇನ್ ದೇಶವು ರಷ್ಯಾಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂಬ ರಷ್ಯಾ ಹೇಳಿಕೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ​ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಸರ್ಕಾರವು ಶಾಂತಿಯನ್ನು ಬಯಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ukraine president emotional speech
ಉಕ್ರೇನ್ ಅಧ್ಯಕ್ಷರ ಭಾವನಾತ್ಮಕ ಭಾಷಣ
author img

By

Published : Feb 24, 2022, 3:12 PM IST

Updated : Oct 10, 2022, 1:35 PM IST

ಕೀವ್(ಉಕ್ರೇನ್): ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಘೋಷಿಸುತ್ತಿದ್ದಂತೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಉಕ್ರೇನ್ ಜನರಲ್ಲಿ ಧೈರ್ಯ ತುಂಬುತ್ತಿದ್ದಾರೆ.

ನಾಗರಿಕರು ಭಯ ಪಡಬಾರದು, ಶಾಂತಿಯಿಂದ ಇರಬೇಕು ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದ್ದು, ರಷ್ಯಾ ತನ್ನ ದೇಶದ ಮಿಲಿಟರಿ ಪಡೆಗಳು ಉಕ್ರೇನ್ ದೇಶದ ಗಡಿಯಲ್ಲಿನ ಸೈನಿಕರ ಮೇಲೆ ದಾಳಿ ನಡೆಸಿದೆ. ಯಾವುದೇ ಕಾರಣಕ್ಕೂ ಗಾಬರಿಯಾಗಬೇಡಿ. ನಾವು ಬಲಿಷ್ಠರಾಗಿದ್ದು, ಗೆಲುವು ನಮಗೇ ದೊರಕಲಿದೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯನ್ ಭಾಷೆಯಲ್ಲಿ ಉಕ್ರೇನಿಯನ್ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ರಷ್ಯಾವನ್ನು ಎದುರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ನಾವು ಬಲಿಷ್ಠರಾಗಿದ್ದೇವೆ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ. ಎಲ್ಲರನ್ನೂ ಸೋಲಿಸುತ್ತೇವೆ. ಏಕೆಂದರೆ ನಾವು 'ಉಕ್ರೇನ್' ಆಗಿದ್ದೇವೆ ಎಂದಿದ್ದಾರೆ.

ಇದಕ್ಕೂ ಮುನ್ನ ಬುಧವಾರ ತಡರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಝೆಲೆನ್ಸ್ಕಿ ಉಕ್ರೇನ್ ದೇಶವು ರಷ್ಯಾಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂಬ ರಷ್ಯಾ ಹೇಳಿಕೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದರ ಜೊತೆಗೆ ರಷ್ಯಾದ ಆಕ್ರಮಣವು ಜೀವಗಳನ್ನು ಬಲಿತೆಗೆದುಕೊಳ್ಳುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಉಕ್ರೇನ್ ವಿಚಾರದಲ್ಲಿ ಭಾರತದ ತಟಸ್ಥ ನಿಲುವು ಸ್ವಾಗತಾರ್ಹ: ರಷ್ಯಾ

ಇದರ ಜೊತೆಗೆ ಉಕ್ರೇನ್‌ನ ಜನರು ಮತ್ತು ಉಕ್ರೇನ್ ಸರ್ಕಾರವು ಶಾಂತಿಯನ್ನು ಬಯಸುತ್ತದೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಭಾವನಾತ್ಮಕವಾಗಿ ಮಾತನಾಡಿದ್ದರು.

Last Updated : Oct 10, 2022, 1:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.