ETV Bharat / international

ಉಕ್ರೇನ್ ಸಂಘರ್ಷ: ನಾಗರಿಕರ ಸ್ಥಳಾಂತರಕ್ಕೆ ರಷ್ಯಾದಿಂದ ಐದು ನಗರಗಳಲ್ಲಿ ಕದನ ವಿರಾಮ - ಉಕ್ರೇನ್ ಮೇಲೆ ರಷ್ಯಾ ಆಕ್ರಮಣ

ಯುದ್ಧಪೀಡಿತ ಉಕ್ರೇನ್​ನಲ್ಲಿ ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕಾಗಿ ಐದು ನಗರಗಳಲ್ಲಿ ರಷ್ಯಾ ಕದನವಿರಾಮ ಘೋಷಿಸಿದೆ ಎಂದು ರಷ್ಯಾದ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

Ukraine conflict: Russia declares ceasefire for humanitarian corridors in Kyiv, Chernihiv, Sumy, Kharkiv, Mariupol
ಉಕ್ರೇನ್ ಸಂಘರ್ಷ: ನಾಗರಿಕರ ಸ್ಥಳಾಂತರಕ್ಕೆ ರಷ್ಯಾದಿಂದ ಐದು ನಗರಗಳಲ್ಲಿ ಕದನ ವಿರಾಮ
author img

By

Published : Mar 8, 2022, 9:35 AM IST

ಮಾಸ್ಕೋ(ರಷ್ಯಾ) : ಉಕ್ರೇನ್​ನಲ್ಲಿನ ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕಾಗಿ ರಷ್ಯಾ ಬೆಳಗ್ಗೆ 10 ಗಂಟೆಯಿಂದ ಐದು ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳು ಅಧಿಕೃತ ಹೇಳಿಕೆ ನೀಡಿವೆ.

ಕೈವ್, ಚೆರ್ನಿಹಿವ್, ಸುಮಿ, ಖಾರ್ಕಿವ್ ಮತ್ತು ಮರಿಯುಪೋಲ್ ನಗರಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ರಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಾಗುತ್ತದೆ ಎಂದು ರಷ್ಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೆಲವು ಕಡೆಗಳಲ್ಲಿ ಮಾನವೀಯ ಕಾರಿಡಾರ್​ಗಳನ್ನು ರಚನೆ ಮಾಡಲಾಗಿದ್ದು, ಇನ್ನೂ ಹಲವು ಕಾರಿಡಾರ್​ಗಳನ್ನು ರಚಿಸಬೇಕೆಂಬ ಪ್ರಸ್ತಾಪ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಷ್ಯಾದ ಮತ್ತು ಉಕ್ರೇನಿಯನ್ ಕಡೆಯವರು ಬೆಳಗ್ಗೆ 9:30ರಿಂದ ಪರಸ್ಪರ ಸಂವಹನದಲ್ಲಿ ತೊಡಗಿಸಿಕೊಳ್ಳಲು ಮತ್ತು ಮಾಹಿತಿ ವಿನಿಮಯಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ಮಾರ್ಚ್ 10ರಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರಷ್ಯಾ - ಉಕ್ರೇನ್ ಯುದ್ಧದ ಎಫೆಕ್ಟ್​: ಅಮೆರಿಕ ಷೇರು ಮಾರುಕಟ್ಟೆ ಕುಸಿತ

ಈ ಮೊದಲು ಹಲವು ಪ್ರದೇಶಗಳಲ್ಲಿ ಮಾನವೀಯ ಕಾರಿಡಾರ್​ಗಳನ್ನು ರಚಿಸಲಾಗಿದ್ದು, ಕೆಲವೆಡೆ ಆ ಕಾರಿಡಾರ್​ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ವಿಫಲವಾಗಿದ್ದವು. ಈಗ ಮತ್ತೊಮ್ಮೆ ಐದು ನಗರಗಳಲ್ಲಿ ಕದನ ವಿರಾಮ ಘೋಷಿಸಿ ಮಾನವೀಯ ಕಾರಿಡಾರ್​ಗಳನ್ನು ರಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.