ಲಂಡನ್: ಗೋಧಿ, ಓಟ್ಸ್ ಮತ್ತು ಇತರ ಆಹಾರ ಪದಾರ್ಥಗಳ ರಫ್ತಿನ ಮೇಲೆ ಉಕ್ರೇನ್ ಸರ್ಕಾರ ನಿಷೇಧ ಹೇರಿದೆ.
ಉಕ್ರೇನ್‌ನಲ್ಲಿ ಭೀಕರ ಯುದ್ಧ ನಡೆಯುತ್ತಿದ್ದು ಅಲ್ಲಿನ ಜನರಿಗೆ ಆಹಾರ ಒದಗಿಸುವ ದೃಷ್ಟಿಯಿಂದ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಉಕ್ರೇನ್ ಈ ವಾರ ಕೃಷಿ ರಫ್ತಿನ ಹೊಸ ನಿಯಮಗಳನ್ನು ಪರಿಚಯಿಸಿದ್ದು, ಇದರ ಪ್ರಕಾರ ರಾಗಿ, ಹುರುಳಿ, ಸಕ್ಕರೆ, ಮಾಂಸ ಸೇರಿದಂತೆ ಇತರೆ ಉಪ ಉತ್ಪನ್ನಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 1999ರ ಭಾರತೀಯ ವಿಮಾನ ಅಪಹರಣ ಪ್ರಕರಣದ ಭಯೋತ್ಪಾದಕ ಅಪರಿಚಿತರಿಂದ ಹತ್ಯೆ
ಉಕ್ರೇನ್‌ನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟನ್ನು ತಡೆಗಟ್ಟಲು ಮತ್ತು ಜನರ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ರಫ್ತು ನಿಷೇಧದ ಅಗತ್ಯವಿದೆ ಎಂದು ಉಕ್ರೇನ್‌ನ ಕೃಷಿ ಮತ್ತು ಆಹಾರ ನೀತಿಯ ಸಚಿವ ರೋಮನ್ ಲೆಶ್ಚೆಂಕೊ ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಇಡೀ ಪ್ರಪಂಚಕ್ಕೆ ಗೋಧಿ ಮತ್ತು ಬಾರ್ಲಿಯನ್ನು ರಫ್ತಿನ ಮೂರನೇ ಒಂದು ಭಾಗದಷ್ಟು ಪೂರೈಸುತ್ತವೆ. ಎರಡು ದೇಶಗಳು ಕಳುಹಿಸುವ ಉತ್ಪನ್ನಗಳಿಂದ ಪ್ರಪಂಚದಾದ್ಯಂತ ಬ್ರೆಡ್, ನೂಡಲ್ಸ್ ತಯಾರಿಸಲಾಗುತ್ತದೆ. ಯುದ್ಧದ ನಂತರ ಇವುಗಳ ಬೆಲೆಯೂ ಸಹ ಏರಿಕೆಯಾಗಿದೆ.