ETV Bharat / international

ಚೀನಾ ಪ್ರಾಬಲ್ಯಕ್ಕೆ ಕಡಿವಾಣ: ಭಾರತೀಯರಿಗೆ ಅಗ್ಗವಾಗಲಿದೆ ಬ್ರಿಟನ್‌ ವೀಸಾ

UK visas to Indians: ಜಾಗತಿಕವಾಗಿ ಚೀನಾದ ಪ್ರಾಬಲ್ಯವನ್ನು ತಡೆಯುವ ಉದ್ದೇಶದಿಂದ ಭಾರತದ ಜೊತೆ ದ್ವಿಪಕ್ಷೀಯ ಸಂಬಂಧವೃದ್ಧಿಗೆ ಬ್ರಿಟನ್ ಬಯಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ದೇಶಕ್ಕೆ ಬರುವ ಭಾರತೀಯರಿಗೆ ಅಗ್ಗದ ಹಾಗೂ ಸುಲಭ ವಿಧಾನದಲ್ಲಿ ವೀಸಾ ನೀಡಲು ಮುಂದಾಗಿದೆ.

uk visas to indians in cheper easier way
ಚೀನಾಗೆ ಟಾಂಗ್‌ ನೀಡಲು ಭಾರತೀಯರಿಗೆ ಬ್ರಿಟನ್‌ನಿಂದ ಅಗ್ಗದ ವೀಸಾ..!
author img

By

Published : Jan 2, 2022, 10:03 AM IST

ನವದೆಹಲಿ: ಬ್ರಿಟಿಷ್ ಸರ್ಕಾರವು ತಮ್ಮ ದೇಶಕ್ಕೆ ಬರುವ ಭಾರತೀಯರಿಗೆ ಅಗ್ಗ ಮತ್ತು ಸುಲಭವಾಗಿ ವೀಸಾಗಳನ್ನು ನೀಡಲು ಮುಂದಾಗಿದೆ. ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಈಗಾಗಲೇ ಇರುವ ನಿಯಮಗಳನ್ನು ಸಡಿಲಿಸಲಿದೆ ಎಂದು ತಿಳಿದುಬಂದಿದೆ.

ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಲು ಭಾರತದ ಮನವೊಲಿಸಲು ಯುಕೆ ಈ ವಿನಾಯಿತಿಗಳನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಉದ್ದೇಶಿತ ಎಫ್‌ಟಿಎ ಕುರಿತು ಸಮಾಲೋಚನೆಗಳನ್ನು ಪ್ರಾರಂಭಿಸಲು ಬ್ರಿಟನ್‌ನ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರಗಳ ಖಾತೆ ಸಚಿವೆ ಅನ್ನೆ ಮೇರಿ ಟ್ರಿವಿಲ್ಲೆ ಈ ತಿಂಗಳು ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ, ತನ್ನ ಪ್ರಜೆಗಳ ಮೇಲೆ ಹೇರಲಾಗಿರುವ ವಿವಿಧ ವಲಸೆ ನಿಯಮಗಳನ್ನು ಸಡಿಲಿಕೆ ಮಾಡುವಂತೆ ಭಾರತದ ಬಹುಕಾಲದ ಬೇಡಿಕೆಯನ್ನು ಬ್ರಿಟನ್ ಒಪ್ಪಿಕೊಳ್ಳಬಹುದು.

ಮೇರಿ ಟ್ರಿವಿಲ್ಲೆ ಅವರೊಂದಿಗೆ ದೆಹಲಿಗೆ ಆಗಮಿಸಲಿರುವ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್ ಕೂಡ ಭಾರತದೊಂದಿಗೆ ನಿಕಟ ಸಂಬಂಧಗಳಿಗೆ ಆದ್ಯತೆ ನೀಡುವ ಇಚ್ಛೆ ಹೊಂದಿದ್ದಾರೆ. ಚೀನಾದ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ಉಭಯ ದೇಶಗಳ ನಡುವೆ ಹೆಚ್ಚು ಸೌಹಾರ್ದ, ಸಹಕಾರ ಇರಬೇಕು ಲಿಜ್ ಟ್ರಸ್ ಅಭಿಪ್ರಾಯವಾಗಿದೆ.

ಈಗಿರುವ ವಿವಿಧ ವೀಸಾ ಶುಲ್ಕದ ವಿವರ ಹೀಗಿದೆ..

ಪ್ರಸ್ತುತ ಯುಕೆಗೆ ಪ್ರಯಾಣಿಸುವ ಭಾರತೀಯ ಪ್ರಜೆಗಳಿಗೆ ಕೆಲಸದ ವೀಸಾಗೆ 1.40 ಲಕ್ಷ ರೂ., ವಿದ್ಯಾರ್ಥಿ ವೀಸಾಗೆ 35,000 ರೂ., ಪ್ರವಾಸಿ ವೀಸಾಗೆ 9,500 ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಚೀನಾದ ನಾಗರಿಕರಿಂದ ಇದೇ ವೀಸಾಗಳಿಗೆ ವಿಧಿಸುವ ಶುಲ್ಕಗಳು ತುಂಬಾ ಕಡಿಮೆ. ಭಾರತೀಯ ಮೂಲದ ಹಲವು ಬ್ರಿಟನ್ನರು ಕೂಡ ಭಾರತೀಯರಿಗೆ ವಿಧಿಸುವ ಶುಲ್ಕ ಕಡಿತಗೊಳಿಸುವಂತೆ ಒತ್ತಾಯಿಸುತ್ತಲೇ ಇದ್ದರು.

ಇದನ್ನೂ ಓದಿ: France Cars Fire: ಫ್ರಾನ್ಸ್​ನಲ್ಲಿ ಹೊಸ ವರ್ಷಾಚರಣೆ.. 874 ಕಾರುಗಳಿಗೆ ಬೆಂಕಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.