ETV Bharat / international

ಫ್ರಾನ್ಸ್‌ನಲ್ಲಿ ಆ ನೆನಪಿಗಾಗಿ 'ಡಿ-ಡೇ' ಆಚರಣೆಯಾದ್ರೆ, ಇಂದು ಬ್ರಿಟನ್‌ನಲ್ಲಿ ವಿ-ಡೇ! ಕಾರಣ? - ಫೈಝರ್​ ಕೊರೊನಾ ಲಸಿಕೆ ಸುದ್ದಿ

ಬ್ರಿಟನ್​ನಲ್ಲಿ ಕೊರೊನಾ ವಿರುದ್ಧ ಹೋರಾಡಲು ಫೈಝರ್ ಎಂಬ​ ಕೊರೊನಾ ಲಸಿಕೆ ತಯಾರಾಗಿದ್ದು, ಈ ಹಿನ್ನೆಲೆಯಲ್ಲಿ 'ವಿ-ಡೇ' ಆಚರಿಸಲಾಗುತ್ತಿದೆ.

ಫೈಝರ್​ ಕೊರೊನಾ ಲಸಿಕೆ
ಫೈಝರ್​ ಕೊರೊನಾ ಲಸಿಕೆ
author img

By

Published : Dec 8, 2020, 11:09 AM IST

ಲಂಡನ್: ಎರಡನೇ ಮಹಾಯುದ್ಧ(1939-45)ದ ಸಂದರ್ಭದಲ್ಲಿ ನಾಜಿ ಜರ್ಮನಿಯನ್ನು ಸೋಲಿಸಲು ಅಂತಿಮವಾಗಿ ಫ್ರಾನ್ಸ್​ ಕೈಗೊಂಡ ಸಿದ್ಧತೆಗಳ ಬಗೆಗಿನ ನೆನಪಿಗಾಗಿ ಫ್ರಾನ್ಸ್​ನಲ್ಲಿ 'ಡಿ-ಡೇ' ಆಚರಿಸಲಾಗುತ್ತದೆ. ಆದರೆ ಈಗ ಬ್ರಿಟನ್​ನಲ್ಲಿ ಕೊರೊನಾ ವಿರುದ್ಧ ಹೋರಾಡಲು ಫೈಝರ್​ ಕೊರೊನಾ ಲಸಿಕೆ ತಯಾರಾಗಿದೆ. ಈ ಹಿನ್ನೆಲೆಯಲ್ಲಿ 'ವಿ-ಡೇ'ಯನ್ನು ಆಚರಿಸಲಾಗುತ್ತಿದೆ.

ಸದ್ಯ ದೇಶದಲ್ಲಿ 8 ಲಕ್ಷ ಕೊರೊನಾ ವ್ಯಾಕ್ಸಿನ್​ ತಯಾರಾಗಿದ್ದು, ಯಾರಿಗೆ ಲಸಿಕೆ ನೀಡಬೇಕು ಎಂಬುದನ್ನು ನಿರ್ಧರಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಗಂಭೀರ ಚರ್ಚೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ಈ ಸಂಬಂಧ ಮಾಹಿತಿ ರವಾನಿಸಿರುವ ಅಧಿಕಾರಿಗಳು, "ನಮಗೆ ಕರೆ ಮಾಡಬೇಡಿ, ನಾವು ನಿಮ್ಮನ್ನು ಕರೆಯುತ್ತೇವೆ. ಅಪಾಯಿಂಟ್ಮೆಂಟ್ ವ್ಯವಸ್ಥೆ ಮಾಡಲು ಎನ್ಎಚ್ಎಸ್​ ಸಿದ್ಧತೆ ನಡೆಸುತ್ತಿದೆ" ಎಂದಿದ್ದಾರೆ.

"ಬಹುಪಾಲು ಜನರಿಗೆ ಜನವರಿ, ಫೆಬ್ರವರಿ, ಮಾರ್ಚ್​ನಲ್ಲಿ ಲಸಿಕೆ ನೀಡಲಾಗುತ್ತದೆ. ಈ ವರ್ಷದೊಳಗೆ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಡಿಸೆಂಬರ್​ ತಿಂಗಳಲ್ಲಿ ಲಸಿಕೆ ದೊರಕುತ್ತದೆ" ಎಂದು ಎನ್ಎಚ್ಎಸ್​ನ ಮುಖ್ಯ ಕಾರ್ಯನಿರ್ವಾಹಕ ಕ್ರಿಸ್ ಹಾಪ್ಸನ್ ಹೇಳಿದರು.

ಓದಿ: ಲಂಡನ್‌: ಭಾರತೀಯ ಮೂಲದ ವ್ಯಕ್ತಿಗೆ ಮೊದಲ ಕೋವಿಡ್‌ ವ್ಯಾಕ್ಸಿನ್‌

ವಿಶ್ವಾದ್ಯಂತ 1.5 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ಕೊರೊನಾ ಅಂತ್ಯಗೊಳಿಸಲು ಬ್ರಿಟನ್​ ಮುಂದಾಗಿದ್ದು, ಫೈಝರ್​ ಎಂಬ ಲಸಿಕೆ ವಿತರಣೆಗೆ ಸಿದ್ಧವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.