ಕೀವ್(ಉಕ್ರೇನ್): ರಷ್ಯಾ ದಾಳಿಯಿಂದ ತಮ್ಮನ್ನು ರಕ್ಷಿಸುವಂತೆ ವಿಶ್ವದ ದೊಡ್ಡಣ್ಣ ಅಮೆರಿಕದ ಮೊರೆ ಹೋಗಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದೀಗ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾರೆ. ಇಲ್ಲಿ ಹೋರಾಟ ನಡೆಯುತ್ತಿದೆ. ನಮಗೆ ಶಸ್ತ್ರಾಸ್ತ್ರಗಳ ಅಗತ್ಯವಿದೆ ದಾಳಿಯಲ್ಲ. ಅಮೆರಿಕದ ರಕ್ಷಣಾ ಕಾರ್ಯಾಚರಣೆ ನಮಗೆ ಬೇಕಿಲ್ಲ ಎಂದು ಝೆಲೆನ್ಸ್ಕಿ ಹೇಳಿರುವುದಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೆರಿಕ ಗುಪ್ತಚರ ದಳ ಮೂಲಗಳ ಮಾಹಿತಿ ಆಧರಿಸಿರುವ ವರದಿಯಲ್ಲಿ ಝೆಲೆನ್ಸ್ಕಿಯನ್ನು ಉತ್ಸಾಹದಾಯಕ ಎಂದು ಕರೆದಿದ್ದಾರೆ.
ಆಕ್ರಮಣಕಾರಿ ರಷ್ಯಾದ ಪಡೆಗಳು ಇಂದು ಉಕ್ರೇನ್ ರಾಜಧಾನಿ ಕೀವ್ ಅನ್ನು ಎಲ್ಲ ದಿಕ್ಕುಗಳಿಂದ ಸುತ್ತುವರೆದಿವೆ. ಪುಟ್ಟ ರಾಷ್ಟ್ರದಲ್ಲಿನ ಎಲ್ಲ ನಗರಗಳು ಹಾಗೂ ಸೇನಾ ನೆಲೆಗಳ ಮೇಲೆ ವಾಯುದಾಳಿಯ ನಂತರ ರಾಜಧಾನಿಯನ್ನು ಸಂಪೂರ್ಣವಾಗಿ ವಶಕ್ಕೆ ಪಡೆಯಲು ಮುಂದಾಗಿರುವುದು ಸ್ಪಷ್ಟವಾಗಿದೆ.
ನಿನ್ನೆಯಷ್ಟೇ ವಿಡಿಯೋವೊಂದರಲ್ಲಿ ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಅನ್ನು ಪ್ರವೇಶಿಸಿವೆ. ಮತ್ತೊಂದೆಡೆ ಏನೇ ಆದರೂ ತಾವು ಕೀವ್ನಲ್ಲೇ ಉಳಿಯುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದರು. ಇದೀಗ ಮತ್ತೊಂದು ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕೀವ್‌ನ ಪ್ರಮುಖ ಮಾರ್ಗಗಳಲ್ಲಿ ಒಂದಾದ ರಷ್ಯಾದ ದಾಳಿಯನ್ನು ಹಿಮ್ಮೆಟ್ಟಿಸಿದೆ ಎಂದು ಉಕ್ರೇನ್ ಸೇನೆಯು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಉಕ್ರೇನ್‌ಗೆ ಫ್ರಾನ್ಸ್ ಶಸ್ತ್ರಾಸ್ತ್ರ ಬಲ.. ಯುದ್ಧ ನಿಲ್ಲಿಸದಿರಲು ಅಧ್ಯಕ್ಷ ಝೆಲೆನ್ಸ್ಕಿ ಪಣ..