ಮರಿಯುಪೋಲ್ (ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗಿ 14 ದಿನಗಳ ಕಳೆದಿವೆ. ಆದರೂ ಇನ್ನು ಯುದ್ಧ ನಿಂತಿಲ್ಲ. ಆದರೆ ಉಕ್ರೇನ್ ಪ್ರಜೆಗಳ ಸ್ಥಿತಿ ಶೋಚನಿಯವಾಗಿದೆ. ನೀರು - ಆಹಾರ ಇಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ.
ಮರಿಯುಪೋಲ್ ನಗರದ ಬೀದಿ-ಬೀದಿಗಳಲ್ಲಿ ಶವಗಳು ಬಿದ್ದಿವೆ. ಹಸಿದ ಜನರು ಆಹಾರಕ್ಕಾಗಿ ಅಂಗಡಿಗಳಿಗೆ ನುಗ್ಗುತ್ತಿದ್ದಾರೆ. ಹಿಮವನ್ನು ಕರಗಿಸಿ ನೀರು ಕುಡಿಯುತ್ತಿದ್ದಾರೆ. ಈ ಆಯಕಟ್ಟಿನ ಬಂದರು ನಗರವನ್ನು ಬಡಿಯುವ ರಷ್ಯಾದ ಶೆಲ್‌ಗಳ ಶಬ್ದಕ್ಕೆಸಾವಿರಾರು ಜನರು ನೆಲಮಾಳಿಗೆಯ ಕತ್ತಲಲ್ಲಿ ಜೀವನ ಕಳೆಯುತ್ತಿದ್ದಾರೆ.
ನೆಲ ಮಾಳಗೆಯ ಎಣ್ಣೆ ದೀಪದ ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಮಧ್ಯೆ ಕುಳಿತಕೊಂಡ ಮಹಿಳೆಯೊಬ್ಬರು, ಬಾವುಕರಾಗಿ ನಾನೇಕೆ ಅಳಬಾರದು?, ನನಗೆ ನನ್ನ ಮನೆ ಬೇಕು. ನನಗೆ ನನ್ನ ಕೆಲಸ ಬೇಕು. ನಾನು ಜನರ ಬಗ್ಗೆ ಮತ್ತು ನಗರದ ಬಗ್ಗೆ ಹಾಗೂ ಮಕ್ಕಳ ಬಗ್ಗೆ ತುಂಬಾ ದುಃಖಿತನಾಗಿದ್ದೇನೆ ಎಂದು ನೊಂದಿದ್ದಾರೆ.
ಓದಿ: ಎಕ್ಸಿಟ್ ಪೋಲ್: ಉತ್ತರ ಪ್ರದೇಶದಲ್ಲಿ ಭವಿಷ್ಯ ನಿಜವಾಗುವುದೇ?, ಏನಿದರ ಲೆಕ್ಕಾಚಾರ?
430,000 ಸೈನ್ಯ ಸುತ್ತುವರೆದಿರುವ ಈ ನಗರದಲ್ಲಿ ಮಾನವೀಯ ಬಿಕ್ಕಟ್ಟು ತೆರೆದುಕೊಂಡಿದೆ. ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ನಾಗರಿಕರನ್ನು ಸ್ಥಳಾಂತರಿಸಲು ಮತ್ತು ಗೊತ್ತುಪಡಿಸಿದ ಸುರಕ್ಷಿತ ಕಾರಿಡಾರ್ ಮೂಲಕ ಅಗತ್ಯವಿರುವ ಆಹಾರ, ನೀರು ಮತ್ತು ಔಷಧವನ್ನು ತಲುಪಿಸುವ ಪ್ರಯತ್ನ ವಿಫಲವಾಗಿದೆ ಎಂದು ಇಲ್ಲಿನ ಜನರ ಮಾತನಾಡಿಕೊಳ್ಳುತ್ತಿದ್ದಾರೆ.
ಮಂಗಳವಾರ ತಡವಾಗಿ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಕೀವ್ನಲ್ಲಿರುವ ಅಧ್ಯಕ್ಷೀಯ ಕಚೇರಿಗಳ ಬಳಿ ನಿಂತಿರುವ ವಿಡಿಯೋವನ್ನು ಬಿಡುಗಡೆ ಮಾಡಿದರು. ಅವರ ಹಿಂದೆ ಮರಳಿನ ಚೀಲಗಳ ರಾಶಿಗಳು, ಹಿಮಧೂಳಿನ ಫರ್ ಮರ ಮತ್ತು ಕೆಲವು ಕಾರುಗಳು ಇದ್ದವು. ದೇಶದ ಅಧಿಕಾರದ ಗದ್ದುಗೆಯ ಬಳಿ ಅವರನ್ನು ತೋರಿಸುತ್ತಿರುವ 24 ಗಂಟೆಗಳಲ್ಲಿ ಇದು ಎರಡನೇ ವಿಡಿಯೋ ಆಗಿದೆ.