ETV Bharat / international

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಭೇಟಿಯಾಗಿ ಧೈರ್ಯ ತುಂಬಿದ ಕೇಂದ್ರ ಸಚಿವ ಸಿಂಧಿಯಾ - ರೊಮೇನಿಯಾ ನಿಲ್ದಾಣದಲ್ಲಿ ಭಾರತೀಯರ ಜೊತೆ ಮಾತುಕತೆ

ಉಕ್ರೇನ್​ನಲ್ಲಿ ಸಿಲುಕಿ ಪರದಾಡುತ್ತಿರುವ ಭಾರತೀಯರ ರಕ್ಷಣೆಗೆ ರೊಮೇನಿಯಾದ ಬುಕಾರೆಸ್ಟ್​ ತಲುಪಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಅಲ್ಲಿನ ಭಾರತೀಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಧೈರ್ಯ ತುಂಬಿದರು.

Scindia interacts
ಸಚಿವ ಸಿಂಧಿಯಾ
author img

By

Published : Mar 2, 2022, 7:25 AM IST

Updated : Mar 2, 2022, 7:47 AM IST

ಬುಕಾರೆಸ್ಟ್: ಯುದ್ಧಪೀಡಿತ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವುದನ್ನು ಕಾರ್ಯಕ್ಕೆ ಕೇಂದ್ರ ಸರ್ಕಾರ ವೇಗ ನೀಡಿದೆ. ಇದಕ್ಕಾಗಿ 4 ಕೇಂದ್ರ ಸಚಿವರನ್ನು ನಿಯೋಜಿಸಿ, ಉಕ್ರೇನ್​ ನೆರೆಯ ರಾಷ್ಟ್ರಗಳಿಗೆ ಕಳುಹಿಸಲಾಗಿದೆ. ಸಚಿವರು ಅಲ್ಲಿದ್ದುಕೊಂಡು ಆ ದೇಶದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಿಕೊಡುವ ಜವಾಬ್ದಾರಿಯನ್ನು ನೀಡಲಾಗಿದೆ.

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಭೇಟಿಯಾಗಿ ಧೈರ್ಯ ತುಂಬಿದ ಕೇಂದ್ರ ಸಚಿವ ಸಿಂಧಿಯಾ

ಅದರಂತೆ ರೊಮೇನಿಯಾದ ಬುಕಾರೆಸ್ಟ್​ ತಲುಪಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಅಲ್ಲಿನ ಭಾರತೀಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅಲ್ಲದೇ, ಶೀಘ್ರವೇ ತಮ್ಮನ್ನು ತಾಯ್ನಾಡಿಗೆ ಕರೆದೊಯ್ಯಲಾಗುವುದು ಎಂದು ಧೈರ್ಯ ತುಂಬಿದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಸಿಂಧಿಯಾ, ಇಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ದಾಳಿಯಿಂದ ತತ್ತರಿಸಿರುವ ಜನರಿಗೆ ಧೈರ್ಯ ತುಂಬಲಾಗಿದೆ. ಇವರನ್ನು ತಕ್ಷಣವೇ ಇಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಇದಲ್ಲದೇ, ಉಕ್ರೇನ್​ನಲ್ಲಿನ ಭಾರತೀಯರನ್ನು ಕರೆತರಲು ನಿಯೋಜಿಸಿರುವ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಹಂಗೇರಿಯಲ್ಲಿ ಭಾರತೀಯರ ತೆರವು ಮೇಲ್ವಿಚಾರಣೆ ನಡೆಸಿದರೆ, ಕಿರಣ್ ರಿಜಿಜು ಸ್ಲೋವಾಕಿಯಾದಲ್ಲಿ, ವಿಕೆ ಸಿಂಗ್ ಪೋಲೆಂಡ್‌ನಲ್ಲಿ ಭಾರತೀಯರ ತೆರವು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಭಾರತದತ್ತ ಹೊರಟ ಮತ್ತೊಂದು ವಿಮಾನ: ರೊಮೇನಿಯಾದಿಂದ ಇಂಡಿಯನ್​ ಏರ್​​​​ಫೋರ್ಸ್​​ನ ಸಿ-17 ನಾಗರಿಕ ವಿಮಾನ ಪ್ರಯಾಣ ಬೆಳೆಸಿದ್ದು, ಸಂಜೆ ನಾಲ್ಕು ಗಂಟೆಗೆ ಹಿಂಡನ್​ ಏರ್​​ಬೇಸ್​ಗೆ ಬಂದಿಳಿಯಲಿದೆ. ಇಂದು ಇನ್ನು ಹಲವು ವಿಮಾನಗಳು ಉಕ್ರೇನ್​​ನಲ್ಲಿರುವ ನಾಗರಿಕರನ್ನು ಕರೆದುಕೊಂಡು ಭಾರತಕ್ಕೆ ಬಂದಿಳಿಯಲಿವೆ.

ಓದಿ: ದೆಹಲಿಗೆ ಬಂದಿಳಿದ 218 ಭಾರತೀಯರಿದ್ದ 9ನೇ ವಿಮಾನ

Last Updated : Mar 2, 2022, 7:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.