ETV Bharat / international

ರಷ್ಯಾ ಜೊತೆ ಮಾತುಕತೆಗೆ ಒಪ್ಪದ ಉಕ್ರೇನ್​​.. ಆಕ್ರಮಣ ಮತ್ತಷ್ಟು ತೀವ್ರಗೊಳಿಸಲು ಪುಟಿನ್​ ಆದೇಶ

ಉಕ್ರೇನ್​​ ಮೇಲಿನ ದಾಳಿ ಮತ್ತಷ್ಟು ಮುಂದುವರೆಸಲು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​​ ಆದೇಶ ನೀಡಿದ್ದು, ಎಲ್ಲ ದಿಕ್ಕುಗಳಿಂದಲೂ ಆಕ್ರಮಣ ಮಾಡಲು ಸೂಚನೆ ನೀಡಿದ್ದಾರೆ.

Russian Army
Russian Army
author img

By

Published : Feb 26, 2022, 10:07 PM IST

ಮಾಸ್ಕೋ(ರಷ್ಯಾ): ರಷ್ಯಾ ಜೊತೆ ಬೆಲಾರಸ್​​ನಲ್ಲಿ ಮಾತುಕತೆ ನಡೆಸಲು ಉಕ್ರೇನ್ ಹಿಂದೇಟು ಹಾಕಿದೆ ಎಂಬ ಮಾಹಿತಿ ಲಭ್ಯವಾಗಿರುವ ಬೆನ್ನಲ್ಲೇ ಮಿಲಿಟರಿ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಲು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​ ಆದೇಶ ನೀಡಿದ್ದಾರೆಂಬ ಮಾಹಿತಿ ಇದೀಗ ಹೊರಬಿದ್ದಿದೆ.

  • #UPDATE The Russian army has been given orders to broaden its offensive in Ukraine "from all directions", after Kyiv refused to hold talks in Belarus, Moscow's defence ministry said in a statement pic.twitter.com/gE2pCKl4FO

    — AFP News Agency (@AFP) February 26, 2022 " class="align-text-top noRightClick twitterSection" data=" ">

ಕಳೆದ ಮೂರು ದಿನಗಳ ಹಿಂದೆ ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದು, ಇದಕ್ಕೆ ಇಂದು ಮಧ್ಯಾಹ್ನ ಪೂರ್ಣ ವಿರಾಮ ನೀಡಿ, ಮಾತುಕತೆಗೆ ಬರುವಂತೆ ಉಕ್ರೇನ್​ಗೆ ಸೂಚನೆ ನೀಡಲಾಗಿತ್ತು. ಆದರೆ, ಇದಕ್ಕೆ ಉಕ್ರೇನ್​​ ಹಿಂದೇಟು ಹಾಕುತ್ತಿದ್ದಂತೆ ಇದೀಗ ಎಲ್ಲ ದಿಕ್ಕುಗಳಿಂದಲೂ ಆಕ್ರಮಣ ಮತ್ತಷ್ಟು ತೀವ್ರಗೊಳಿಸಲು ರಷ್ಯಾ ಸೇನೆಗೆ ಸೂಚನೆ ನೀಡಲಾಗಿದೆ ಎಂದು ಮಾಸ್ಕೋದಲ್ಲಿರುವ ರಕ್ಷಣಾ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿರಿ: ಉಕ್ರೇನ್​​ನಿಂದ ತಾಯ್ನಾಡಿಗೆ ಬಂದ ಖುಷಿ.. ಕೇಂದ್ರ ಸರ್ಕಾರವನ್ನ ಹಾಡಿ ಹೊಗಳಿದ ವಿದ್ಯಾರ್ಥಿಗಳು!

ಉಕ್ರೇನ್​ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ಈಗಾಗಲೇ ನೂರಾರು ಸೈನಿಕರು ಹಾಗೂ ನಾಗರಿಕರನ್ನ ಹತ್ಯೆ ಮಾಡಿದ್ದು, ಬಹುತೇಕ ಎಲ್ಲ ನಗರಗಳ ಮೇಲೆ ದಾಳಿ ನಡೆಸುತ್ತಿದೆ.

ಉಕ್ರೇನ್ ಶಸ್ತ್ರಾಸ್ತ್ರ ಕೆಳಗಿಳಿಸಿದರೆ ನಾವು ಮಾತುಕತೆಗೆ ಸಿದ್ಧವಿರುವುದಾಗಿ ಈಗಾಗಲೇ ರಷ್ಯಾ ಹೇಳಿಕೊಂಡಿದ್ದು, ಅಲ್ಲಿನ ಅಧಿಕಾರವನ್ನ ಮಿಲಿಟರಿ ಪಡೆ ತಮ್ಮ ಹತೋಟಿಗೆ ತೆಗೆದುಕೊಳ್ಳುವಂತೆ ಈಗಾಗಲೇ ಸೂಚನೆ ಸಹ ನೀಡಿದೆ. ಇದರ ಹೊರತಾಗಿ ಕೂಡ ಉಭಯ ದೇಶಗಳ ಮಧ್ಯೆ ಸಂಘರ್ಷ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.