ಮಾಸ್ಕೋ(ರಷ್ಯಾ): ವಿಶ್ವಸಂಸ್ಥೆಯ ಎಚ್ಚರಿಕೆ ಮತ್ತು ಅಮೆರಿಕ, ಜಪಾನ್, ಕೆನಡಾ, ಜರ್ಮನಿ ಸೇರಿ ವಿವಿಧ ದೇಶಗಳ ಆರ್ಥಿಕ ನಿರ್ಬಂಧಗಳ ಮಧ್ಯೆಯೂ ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಗೆ ಮುಂದಡಿ ಇಟ್ಟರು.
ಉಕ್ರೇನ್ನಿಂದ ಬರುತ್ತಿರುವ ಬೆದರಿಕೆಗಳಿಗೆ ಉತ್ತರವಾಗಿ ಆ ರಾಷ್ಟ್ರದಲ್ಲಿ ಮಿಟಿಟರಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಮ್ಮ ಯುದ್ಧ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
-
Our plans (of special military operation) in Ukraine do not include occupying Ukrainian territory. We will aim at demilitarization and denazification of Ukraine : Russian President Vladimir Putin in his address pic.twitter.com/YZLh3PWQw3
— ANI (@ANI) February 24, 2022 " class="align-text-top noRightClick twitterSection" data="
">Our plans (of special military operation) in Ukraine do not include occupying Ukrainian territory. We will aim at demilitarization and denazification of Ukraine : Russian President Vladimir Putin in his address pic.twitter.com/YZLh3PWQw3
— ANI (@ANI) February 24, 2022Our plans (of special military operation) in Ukraine do not include occupying Ukrainian territory. We will aim at demilitarization and denazification of Ukraine : Russian President Vladimir Putin in his address pic.twitter.com/YZLh3PWQw3
— ANI (@ANI) February 24, 2022
ಉಕ್ರೇನ್ ಅನ್ನು ವಶಪಡಿಸಿಕೊಳ್ಳುವುದು ನಮ್ಮ ಗುರಿಯಲ್ಲ. ಇದು ನಾಗರಿಕರನ್ನು ರಕ್ಷಿಸುವ ಉದ್ದೇಶವಾಗಿದೆ. ರಕ್ತಪಾತದ ಹೊಣೆಗಾರಿಕೆ ಉಕ್ರೇನಿಯನ್ 'ಆಡಳಿತ'ದ ಮೇಲಿದೆ ಎಂದು ಪುಟಿನ್ ಆರೋಪಿಸಿದ್ದಾರೆ.
ಬೇರೆ ರಾಷ್ಟ್ರಗಳು ಮಧ್ಯಪ್ರವೇಶಿಸದಂತೆ ಎಚ್ಚರಿಕೆ: ಇನ್ನು ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ಬಳಿಕ ವಿಶ್ವದ ಇತರೆ ರಾಷ್ಟ್ರಗಳು ಇದರಲ್ಲಿ ತಲೆದೂರಿಸದಂತೆ ಪುಟಿನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಒಂದು ವೇಳೆ ಈ ಬಿಕ್ಕಟ್ಟಿನಲ್ಲಿ ಇತರೆ ದೇಶಗಳು ಮಧ್ಯಪ್ರವೇಶಿಸಿದ್ದೇ ಆದಲ್ಲಿ 'ಎಂದೂ ನೋಡಿರದ ಭೀಕರ ಪರಿಣಾಮಗಳಿಗೆ ಕಾರಣವಾಗುತ್ತೀರಾ' ಎಂದು ಪುಟಿನ್ ಎಚ್ಚರಿಸಿದ್ದಾರೆ.