ಮಾಸ್ಕೋ: ಉಕ್ರೇನ್‌ನಿಂದ ವಶಪಡಿಸಿಕೊಂಡ ಕ್ರಿಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡ ಎಂಟನೇ ವಾರ್ಷಿಕೋತ್ಸವದ ನಿಮಿತ್ತ ಶುಕ್ರವಾರ ಇಲ್ಲಿನ ಸ್ಟೇಡಿಯಂನಲ್ಲಿ ಬೃಹತ್ ಧ್ವಜ ರ‍್ಯಾಲಿ ನಡೆಯಿತು. ಈ ರ‍್ಯಾಲಿಯಲ್ಲಿ ಭಾಗಿಯಾದ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಹೋರಾಡುತ್ತಿರುವ ತನ್ನ ಸೈನಿಕರ ಬಗ್ಗೆ ಹೊಗಳಿಕೆಯ ಮಾತನಾಡಿದರು.
ಉಕ್ರೇನ್‌ನೊಂದಿಗೆ ರಾಜತಾಂತ್ರಿಕ ಮಾತುಕತೆಗಳಲ್ಲಿ ರಷ್ಯಾ ನಿಯೋಗದ ನಾಯಕ, ತಮ್ಮ ಭಿನ್ನಾಭಿಪ್ರಾಯಗಳನ್ನು ಕಡಿಮೆಗೊಳಿಸಿವೆ ಎಂದು ಹೇಳಿದರು. ಆದರೆ, ಉಭಯ ದೇಶಗಳ ಜೊತೆ ನಡೆದ ಮಾತುಕತೆ ಬಗ್ಗೆ ಉಕ್ರೇನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ರಷ್ಯಾದ ಪಡೆಗಳು ರಾಜಧಾನಿ ಕೀವ್ ಸೇರಿದಂತೆ ಉಕ್ರೇನಿಯನ್ ನಗರಗಳ ಮೇಲೆ ಮಾರಣಾಂತಿಕ ಗುಂಡಿನ ಮಳೆಯನ್ನು ಮುಂದುವರೆಸಿದೆ. ಪೋಲಿಷ್ ಗಡಿಗೆ ಸಮೀಪವಿರುವ ಎಲ್ವಿವ್ ಹೊರವಲಯದ ವಿಮಾನ ದುರಸ್ತಿ ಸ್ಥಾಪನೆ ಕೇಂದ್ರವನ್ನು ರಷ್ಯಾ ಉಡಾಯಿಸಿದೆ.
ಓದಿ: ದುಬೈನಿಂದ ಚಿಕ್ಕಬಳ್ಳಾಪುರಕ್ಕೆ ಬಂದಿಳಿದ ಆರ್ಆರ್ಆರ್ ಚಿತ್ರತಂಡ.. ಹೋಟೆಲ್ನಲ್ಲಿ ವಾಕಿಂಗ್ ಮಾಡಿದ ರಾಜಮೌಳಿ
ಯುದ್ಧ ಪ್ರಾರಂಭವಾದಾಗಿನಿಂದ ನಮ್ಮ ಸೈನಿಕರು ಹೆಗಲಿಗೆ ಹೆಗಲುಕೊಟ್ಟು, ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುತ್ತಾರೆ ಮತ್ತು ಬೆಂಬಲಿಸುತ್ತಿದ್ದಾರೆ. ನಾವು ದೀರ್ಘಕಾಲದಿಂದ ಈ ರೀತಿಯ ಒಗ್ಗಟ್ಟ ಹೊಂದಿದ್ದಿಲ್ಲ, ಈಗ ಎಲ್ಲವೂ ಸರಿಯಾಗಿದೆ ಎಂದು ಪುಟಿನ್ ಹೇಳಿದರು. ಎಂಟನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ರ‍್ಯಾಲಿಯು ದೇಶಭಕ್ತಿ ರೂಪಿಸುವ ಪ್ರದರ್ಶನವಾಗಿದೆ ಎಂದು ಆರೋಪಿಸಿ ಕೆಲ ಪ್ರತಿಕೆಗಳು ರಷ್ಯಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ರಷ್ಯಾದೊಳಗೆ ಯುದ್ಧ ವಿರೋಧಿ ಪ್ರತಿಭಟನೆಗಳ ಸ್ಫೋಟದ ನಡುವೆ ಈ ರ‍್ಯಾಲಿ ಭಾರಿ ಮಹತ್ವ ಪಡೆದುಕೊಂಡಿದೆ.
ಓದಿ: ಧೋನಿ ಬಗ್ಗೆ ಅಪಾರ ಗೌರವವಿದೆ, ಅವಶ್ಯಕತೆ ಬಂದಾಗ ಅವರ ಪಕ್ಕ ನಿಲ್ಲುವ ಮೊದಲ ವ್ಯಕ್ತಿ ನಾನು: ಗಂಭೀರ್
ಕಾರ್ಯಕ್ರಮದಲ್ಲಿ ಮೇಡ್ ಇನ್ ಯುಎಸ್‌ಎಸ್‌ಆರ್‌ನ ಪ್ರದರ್ಶನ ಸೇರಿದಂತೆ ದೇಶಭಕ್ತಿ ಗೀತೆಗಳು ಮೊಳಗಿವೆ. ಇದೇ ವೇಳೆ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್, ತಾವು ನಡೆಸುತ್ತಿರುವ ಯುದ್ಧ ನ್ಯಾಯಯುತವಾಗಿದೆ ಎಂದು ಬೈಬಲ್ನ ಸಾಲೊಂದನ್ನು ಉಚ್ಚರಿಸಿದ್ದಾರೆ.
ಉಕ್ರೇನ್ ಮೇಲೆ ನಡೆಯುತ್ತಿರುವ ಯುದ್ಧವನ್ನು ಮಾಸ್ಕೋ ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದು ಕರೆದಿದೆ. ಅಷ್ಟೇ ಅಲ್ಲ ತನ್ನ ಕಾರ್ಯಾಚರಣೆ ವಿರುದ್ಧ ಯಾರೂ ಮಾತನಾಡದಂತೆ ಎಚ್ಚರಿಕೆ ವಹಿಸಿದೆ. ಸಾವಿರಾರು ಯುದ್ಧವಿರೋಧಿ ಪ್ರತಿಭಟನಾಕಾರರನ್ನು ಬಂಧಿಸಿದೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸೈಟ್‌ಗಳನ್ನು ನಿಷೇಧಿಸಿದೆ. ಸುಳ್ಳು ವರದಿ ಹಬ್ಬಿಸುವವರಿಗೆ ಕಠಿಣ ಜೈಲು ಶಿಕ್ಷೆ ವಿಧಿಸುತ್ತಿದೆ.