ಲಂಡನ್: ಇಂಗ್ಲೆಂಡ್ ರಾಜಕುಮಾರ ಹ್ಯಾರಿ ತನ್ನ ಅಜ್ಜ ಪ್ರಿನ್ಸ್ ಫಿಲಿಪ್ ಅವರ ಅಂತ್ಯಕ್ರಿಗೂ ಮುನ್ನ ಲಾಸ್ ಏಂಜಲೀಸ್ನಲ್ಲಿ ತನ್ನ ಹೊಸ ಜೀವನಕ್ಕೆ ತೆರಳಿದ ನಂತರ ಮೊದಲ ಬಾರಿಗೆ ಬ್ರಿಟನ್‌ಗೆ ಮರಳಿದ್ದಾರೆ.
ಲಾಸ್ ಏಂಜಲೀಸ್‌ನಿಂದ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ರಾಜಕುಮಾರ ಬಂದಿದ್ದು, ಮಧ್ಯಾಹ್ನ 1.15ಕ್ಕೆ ಹಿಥ್ರೂ ತಲುಪಿದ್ದಾರೆ ಎಂದು ಡಿಪಿಎ ಸುದ್ದಿ ಸಂಸ್ಥೆ ದಿ ಸನ್ ಪತ್ರಿಕೆ ಉಲ್ಲೇಖಿಸಿ ವರದಿ ಮಾಡಿದೆ.
ರಾಜಕುಮಾರ ಕೆಲ ದಿನಗಳವರಗೂ ಸಂಪರ್ಕತಡೆಯಲ್ಲಿ ಉಳಿಯಬೇಕಾಗುತ್ತದೆ. ಅವರ ಪತ್ನಿ ಮೇಘನ್ ಗರ್ಭಧಾರಣೆಯ ಕಾರಣ ಹಾಜರಾಗುವುದಿಲ್ಲ. ಶನಿವಾರ ಡ್ಯೂಕ್ ಆಫ್ ಎಡಿನ್ಬರ್ಗ್ ಎಂದು ಕರೆಯಲ್ಪಡುವ ಪ್ರಿನ್ಸ್ ಫಿಲಿಪ್ ಅವರ ಅಂತ್ಯಕ್ರಿಯೆ ಮಧ್ಯಾಹ್ನ ವಿಂಡ್ಸರ್ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಬ್ಲ್ಯಾಕ್ ಆರ್ಮಿ ಅಧಿಕಾರಿಯತ್ತ ಬಂದೂಕು ತೋರಿಸಿದ ಆರೋಪ: ಪೊಲೀಸ್ ಅಧಿಕಾರಿ ವಜಾ
ಕೊರೊನಾ ವೈರಸ್ ನಿರ್ಬಂಧದಿಂದಾಗಿ ಕೇವಲ 30 ಜನರಿಗೆ ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ನಿರ್ಬಂಧಗಳಿಂದಾಗಿ ಪೊಲೀಸರು ಮತ್ತು ಬ್ರಿಟಿಷ್ ಸರ್ಕಾರವು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಸಾರ್ವಜನಿಕರಿಗೆ ಒತ್ತಾಯಿಸಿದೆ.
ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಅಂತ್ಯಕ್ರಿಯೆಯಲ್ಲಿ ತಮ್ಮ ಜಾಗ ಬಿಟ್ಟುಕೊಡುವುದಾಗಿ ಘೋಷಿಸಿದ್ದು, ಇದರಿಂದಾಗಿ ಕುಟುಂಬದ ಇನ್ನೊಬ್ಬ ಸದಸ್ಯರು ಭಾಗವಹಿಸಲು ಸಾಧ್ಯವಾಗುತ್ತದೆ.