ಲಂಡನ್: ಹುಟ್ಟಿದ ತಕ್ಷಣವೇ ಲಂಡನ್ನಲ್ಲಿ ಮಗುವಿಗೆ ಕೊರೊನಾ ಸೋಂಕು ತಗುಲಿದೆ.
ನ್ಯುಮೋನಿಯಾದಿಂದ ಬಳಲುತಿದ್ದ ಗರ್ಭಿಣಿಯೊಬ್ಬರು ಕೊರೊನಾ ಸೋಂಕಿಗೆ ಒಳಗಾಗಿರುವ ಭೀತಿಯಲ್ಲೇ ಹೆರಿಗೆಗೆಂದು ನಾರ್ಥ್ ಮಿಡಲ್ಸೆಕ್ಸ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ದಾಖಲಾಗಿದ್ದರು. ಮಗುವಿಗೆ ಜನ್ಮ ನೀಡಿದ ಬಳಿಕ ಆಕೆಯ ರಕ್ತದ ಮಾದರಿ ಫಲಿತಾಂಶ ಧನಾತ್ಮಕ ಎಂದು ಬಂದಿದ್ದು, ಕ್ಷಣಮಾತ್ರದಲ್ಲೇ ಸೋಂಕು ಮಗುವಿಗೆ ತಗುಲಿದೆ.
ಮಗುವು ಗರ್ಭದಲ್ಲಿದ್ದಾಗಲೇ ಸೋಂಕು ತಗುಲಿತ್ತಾ ಅಥವಾ ಜನನದ ಬಳಿಕವಾ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗುತ್ತಿರುವುದರಿಂದ ಇವರಿಬ್ಬರನ್ನೂ ಪ್ರತ್ಯೇಕ ಆಸ್ಪತ್ರೆಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಲಂಡನ್ನಲ್ಲಿ ಈವರೆಗೆ ಒಟ್ಟು 136 ಕೊರೊನಾ ಪ್ರಕರಣಗಳು ವರದಿಯಾಗಿದೆ.