ETV Bharat / international

ಕೊರೊನಾ ಕಾಟ: ನೆಟ್​ಫ್ಲಿಕ್ಸ್​ ಮತ್ತು ಯೂಟ್ಯೂಬ್​ ವಿಡಿಯೋಗಳ ರೆಸಲ್ಯೂಶನ್​ ಕಡಿಮೆಗೊಳಿಸಲು ನಿರ್ಧಾರ

ಕೊರೊನಾ ಕುರಿತು ಮಾಹಿತಿ ಬಿತ್ತರಿಸುವ ಸಲುವಾಗಿ ನೆಟ್​ಫ್ಲಿಕ್ಸ್, ಯುಟ್ಯೂಬ್​ ವಿಡಿಯೋಗಳ ರೆಸಲ್ಯೂಶನ್​ ಕಡಿಮೆಗೊಳಿಸಲು ಎರಡೂ ಸಂಸ್ಥೆಗಳು ನಿರ್ಧಾರ ಕೈಗೊಂಡಿವೆ.

Netflix and YouTube will reduce the default image quality of streaming video
ನೆಟ್​ಫ್ಲಿಕ್ಸ್​ ಮತ್ತು ಯುಟ್ಯೂಬ್
author img

By

Published : Mar 20, 2020, 7:26 PM IST

ಬ್ರಸೆಲ್ಸ್ (ಬೆಲ್ಜಿಯಂ): ಯುರೋಪಿನಲ್ಲಿ ಕೊರೊನಾ ವೈರಸ್ ಭೀತಿಗೆ ಲಕ್ಷಾಂತರ ಜನ ಮನೆಗೇ ಸೀಮಿತರಾಗಿರುವ ಪರಿಣಾಮ ಇಂಟರ್​​ನೆಟ್​ ಮೇಲಿನ ಒತ್ತಡ ಕಡಿಮೆಗೊಳಿಸಲು ಮನರಂಜನೆ ನೀಡುವ ಚಾನೆಲ್​ಗಳಾದ ನೆಟ್​​ಫ್ಲಿಕ್ಸ್​​ ಮತ್ತು ಯುಟ್ಯೂಬ್​ನಲ್ಲಿ ವಿಡಿಯೋ ಸ್ಟ್ರೀಮಿಂಗ್​ ಮತ್ತು ಫೋಟೋಗಳ ರೆಸಲ್ಯೂಶನ್​ ಕಡಿಮೆಗೊಳಿಸಲಾಗುತ್ತದೆ ಎಂದು ಸಂಸ್ಥೆಗಳು ತಿಳಿಸಿವೆ.

ಯುರೋಪಿಯನ್ ಒಕ್ಕೂಟದ ಡಿಜಿಟಲ್​ ಆರ್ಥಿಕತೆ​ ಆಯುಕ್ತ ಥಿಯರಿ ಬ್ರೆಟನ್​ ಅವರು, ಮನರಂಜನೆ ಜೊತೆಗೆ ಕೊರೊನಾ ವೈರಸ್ ಕುರಿತು ಮಾಹಿತಿ ಬಿತ್ತರಿಸುವ ಸಲುವಾಗಿ ಚಾನೆಲ್​ಗಳಲ್ಲಿ ಪ್ರಸಾರವಾಗುವ ವಿಡಿಯೋ ಮತ್ತು ಫೋಟೋಗಳನ್ನು ಹೈ ಡೆಫಿನೇಷನ್​​ನಿಂದ (HD) ಸ್ಟ್ಯಾಂಡರ್ಡ್​​​​​​ ಡೆಫಿನೇಷನ್​​ಗೆ (SD) ಇಳಿಸುವಂತೆ ಒತ್ತಾಯಿಸಿದ್ದರು. ಬ್ರೆಟನ್​ ಅವರ ಮನವಿಗೆ ಈ ಸಂಸ್ಥೆಗಳು ತಡವಾಗಿ ಒಪ್ಪಿಗೆ ಸೂಚಿಸಿವೆ.

ಗೂಗಲ್​​​ನಲ್ಲಿ ವಿಡಿಯೋ ಹಂಚಿಕೆಗೆ ಸಂಬಂಧಿಸಿದಂತೆ ಅನುಸರಿಸುವುದಾಗಿ ಯೂಟ್ಯೂಬ್​ ಹೇಳಿದೆ. ಆದರೆ, ಸೈಟ್​​ನಲ್ಲಿ ವೀಕ್ಷಿಸಿದ ವಿಡಿಯೋಗಳು ಇನ್ನೂ ಹೈ ಡೆಫಿನೇಷನ್​​ನಲ್ಲೇ ಇವೆ ಎಂದು ಎಎಫ್​ಪಿ ವರದಿ ಮಾಡಿದೆ. ಕಡಿಮೆ ನೆಟ್​​ವರ್ಕ್​​ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಸಿಸ್ಟಮ್​​ನಲ್ಲಿ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಗೂಗಲ್​ ವಕ್ತಾರರು ಹೇಳಿದ್ದಾರೆ.

ಗೂಗಲ್​ ಸಿಇಒ ಸುಂದರ್​ ಪಿಚೈ, ಯೂಟ್ಯೂಬ್ ಸಿಇಒ ಸುಸಾನ್​ ವೋಜ್ಸಿಕಿ ಮತ್ತು ಆಯುಕ್ತ ಥಿಯರಿ ಬ್ರೆಟನ್ ಅವರ ಚರ್ಚಿಸಿದ ನಂತರ ಪೂರ್ವ ನಿಯೋಜಿತವಾಗಿ ಯಾವುದೇ ಸಮಸ್ಯೆ ಉಂಟಾಗದಂತೆ ತಾತ್ಕಾಲಿಕವಾಗಿ ಸ್ಟ್ಯಾಂಡರ್ಡ್​​​ ಡೆಫಿನಿಷೇನ್​ಗೆ ಬದಲಾಯಿಸುವ ಪ್ರಕ್ರಿಯೆ ನಡೆಸುತ್ತಿದ್ದೇವೆ. ನೆಟ್​ಫ್ಲಿಕ್ಸ್​​​ 30 ದಿನಗಳ ಕಾಲ ಯುರೋಪಿನಲ್ಲಿ ಬಿಟ್​​ದರ ಕಡಿಮೆಗೊಳಿಸಲು ತಯಾರಿನ ನಡೆಸುತ್ತಿದೆ ಎಂದು ಸ್ಟ್ರೀಮಿಂಗ್​ ವಕ್ತಾರರು ಹೇಳಿದ್ದಾರೆ.

ಡೆಫನೇಷನ್​ ಕಡಿಮೆಗೊಳಿಸಿದರೆ 25 ಪ್ರತಿಶತದಷ್ಟು ಒತ್ತಡ ಕಡಿಮೆ ಮಾಡುತ್ತದೆ ಎಂಬ ಅಂದಾಜು ಇದೆ ಎಂದು ವಕ್ತಾರರು ಹೇಳಿದ್ದಾರೆ. ನೆಟ್​​ಪ್ಲಿಕ್ಸ್​ ಜೊತೆಗೆ ಡಿಸ್ನಿ ಫ್ಲಸ್​, ಹುಲು, ಎಚ್​ಬಿಒ ಮತ್ತು ಅಮೆಜಾನ್​​ಗಳಿಗೂ ಬ್ರೆಟನ್​ ಎಚ್ಚರ ನೀಡಿದ್ದಾರೆ. ಕೊರೊನಾ ವೈರಸ್​ ಭೀತಿ ಹಿನ್ನೆಲೆ ಕ್ಯಾರೆಂಟೈನ್‌, ಶಾಲೆಗಳು, ಅಂಗಡಿಗಳು ಮತ್ತು ಗಡಿಗಳನ್ನು ಮುಚ್ಚಲಾಗಿದೆ ಮತ್ತು ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ದರಿಂದ ಯುರೋಪಿನ ಹೆಚ್ಚು ಜನ ಮನೆಯಲ್ಲೇ ತಂಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.