ETV Bharat / international

ಕೊರೊನಾ ಸೋಂಕಿತರಿಗೆ ಹೈಡ್ರೋಕ್ಲೊರೊಕ್ವಿನ್‌ ನೀಡದಂತೆ ಯುಕೆ ವಿವಿ ಸೂಚನೆ.. - ಹೈಡ್ರೋಕ್ಲೊರೊಕ್ವಿ

ಕೋವಿಡ್-‌19 ಪೀಡಿತರು ಗುಣಮುರಾಗಲು ನೀಡುತ್ತಿರುವ ಮಲೇರಿಯಾ ಔಷಧಿ ಹೈಡ್ರೋಕ್ಲೊರೊಕ್ವಿನ್ ಸಹಕಾರಿಯಾಗುತ್ತಿಲ್ಲ, ಇದನ್ನು ಕೂಡಲೇ ನಿಲ್ಲಿಸುವಂತೆ ಯುಕೆ ಅಧ್ಯಯನವೊಂದು ಸೂಚಿಸಿದೆ.

malaria-drug-didnt-help-virus-patients-big-uk-study-finds
ಕೊರೊನಾ ಸೋಂಕಿತರಿಗೆ ಹೈಡ್ರೋಕ್ಲೊರೊಕ್ವಿನ್‌ ನೀಡದಂತೆ ಯುಕೆ ಅಧ್ಯಯನ ಸೂಚನೆ; ಇದೇ ಕಾರಣ..
author img

By

Published : Jun 6, 2020, 4:18 PM IST

ಲಂಡನ್‌ : ಕೊರೊನಾ ವೈರಸ್‌ ಸೋಂಕಿತರಿಗೆ ನೀಡುತ್ತಿರುವ ಹೈಡ್ರೋಕ್ಲೊರೊಕ್ವಿನ್ ಸಹಕಾರಿಯಾಗುತ್ತಿಲ್ಲ. ಸೋಂಕಿತರಿಗೆ ಈ ಔಷಧ ನೀಡುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಅಧ್ಯಯನವೊಂದು ಸೂಚಿಸಿದೆ.

ನಿನ್ನೆಯಷ್ಟೇ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ್ದು, ಆಸ್ಪತ್ರೆ ಅಥವಾ ಇತರೆ ಸ್ಥಳಗಳಲ್ಲಿ 1542 ರೋಗಿಗಳಿಗೆ ಈ ಔಷಧವನ್ನು ನೀಡಲಾಗಿದೆ. ಆದರೆ, ಇದು ಸಾವಿನ ಪ್ರಮಾಣವನ್ನು ಕಡಿಮೆ ಮಾಡಿಲ್ಲ ಎಂದು ಹೇಳಿದೆ. 28 ದಿನಗಳ ಸಾಮಾನ್ಯ ಚಿಕಿತ್ಸೆಯಿಂದ ಶೇ. 23.5ರಷ್ಟು ರೋಗವನ್ನು ಗುಣಪಡಿಸಿದ್ರೆ, ಹೈಡ್ರೋಕ್ಲೊರೊಕ್ವಿನ್‌ನಿಂದ ಶೇ.25.7ರಷ್ಟು ಸಾಧ್ಯವಾಗುತ್ತಿದೆ. ಹೀಗಾಗಿ ಇದರಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ ಎಂದು ಹೇಳಿದೆ.

ಈ ಔಷಧದಿಂದ ಯಾವುದೇ ಅನುಕೂಲ ಇಲ್ಲ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹೇಳಿದೆ. ಸದ್ಯ ಫಲಿತಾಂಶವನ್ನು ಪ್ರಕಟಿಸಿಲ್ಲ. ಮುಂದಿನ ದಿನಗಳಲ್ಲಿ ಪೂರ್ಣ ಮಾಹಿತಿ ಒದಗಿಸುವುದಾಗಿ ತಿಳಿಸಿದೆ. ಕೋವಿಡ್-19‌ ಸೋಂಕಿತರಿಗೆ ಇದು ಎಷ್ಟು ಸುರಕ್ಷಿತ ಅಥವಾ ಪರಿಣಾಮಕಾರಿ ಎಂಬುದು ಗೊತ್ತಿಲ್ಲ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.