ETV Bharat / international

ಜಗತ್ತಿನಲ್ಲಿ ಮತ್ತೆ ಏರಿಕೆ ಕಂಡ ಕೊರೊನಾ... ವಿಶ್ವ ಆರೋಗ್ಯ ಸಂಸ್ಥೆ ಕಳವಳ..! - ಕೋವಿಡ್ ವ್ಯಾಕ್ಸಿನ್

ವಿಶ್ವದಲ್ಲಿ ಕೋವಿಡ್​​ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಕಳೆದ ವಾರ 34 ಲಕ್ಷ ಜನರಿಗೆ ವೈರಸ್ ದೃಢಪಟ್ಟಿದೆ.

ಕೊರೊನಾ
ಕೊರೊನಾ
author img

By

Published : Jul 22, 2021, 6:30 AM IST

ಜಿನೀವಾ: ಜಗತ್ತಿನಲ್ಲಿ ಸದ್ಯಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕಳೆದ ವಾರ ವಿಶ್ವದಲ್ಲಿ 34 ಲಕ್ಷ ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಅಂಕಿ - ಅಂಶ ಹಿಂದಿನ ವಾರಕ್ಕಿಂದ ಶೇಕಡಾ 12 ರಷ್ಟು ಹೆಚ್ಚಾಗಿದೆ. ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ, 57 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಡಬ್ಲ್ಯೂಹೆಚ್​ಒ ತಿಳಿಸಿದೆ.

ಪ್ರಪಂಚದಲ್ಲಿ ಮುಂದಿನ ಮೂರು ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 200 ಮಿಲಿಯನ್ ದಾಟಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಪಶ್ಚಿಮ ಪೆಸಿಫಿಕ್​ ಮತ್ತು ಯೂರೋಪಿಯನ್​ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿರೀಕ್ಷೆಗೂ ಮೀರಿ ವ್ಯಾಪಿಸಿದೆ. ಕಳೆದ ವಾರ ಇಂಡೋನೇಷ್ಯಾ, ಬ್ರಿಟನ್, ಬ್ರೆಜಿಲ್​, ಭಾರತ ಮತ್ತು ಅಮೆರಿಕದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದಿವೆ.

ಇದನ್ನೂ ಓದಿ: ಕೇಂದ್ರದ ತಪ್ಪು ನಿರ್ಧಾರಕ್ಕೆ 50 ಲಕ್ಷ ಮಂದಿ ಬಲಿ: ರಾಹುಲ್‌ ಟ್ವೀಟ್‌

ವ್ಯಾಕ್ಸಿನೇಷನ್​ ಬಿರುಸಿನಿಂದ ಸಾಗುತ್ತಿದ್ದರೂ, ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವವರಲ್ಲಿ ವೈರಸ್ ಕಾಣಿಸಿಕೊಳ್ಳುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಶೇಕಡಾ 40 ರಷ್ಟು ಜನರಿಗೆ ವ್ಯಾಕ್ಸಿನ್​ ಹಾಕುವಂತೆ ಎಲ್ಲ ದೇಶಗಳಿಗೆ ಡಬ್ಲ್ಯೂಹೆಚ್​ಒ ಮನವಿ ಮಾಡಿದೆ. ಈವರೆಗೆ ವಿಶ್ವದ 300 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಅದರಲ್ಲಿ ಕೇವಲ ಶೇಕಡಾ 1 ರಷ್ಟನ್ನು ಮಾತ್ರ ಬಡ ದೇಶಗಳ ಜನರು ಸ್ವೀಕರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.