ETV Bharat / international

300 ಗುಂಡು ಹಾರಿಸಿ ರಷ್ಯಾದ ಶಸ್ತ್ರಸಜ್ಜಿತ 280 ಯುದ್ಧ ಟ್ಯಾಂಕ್ ನಾಶ ಮಾಡಿದ ಉಕ್ರೇನ್​!

author img

By

Published : Mar 4, 2022, 7:21 PM IST

ರಷ್ಯಾ ದಾಳಿಗೆ ತಿರುಗೇಟು ನೀಡುತ್ತಿರುವ ಉಕ್ರೇನ್​ ಇಲ್ಲಿಯವರೆಗೆ ಎದುರಾಳಿ ದೇಶದ ಸಾವಿರಾರು ಯೋಧರ ಹತ್ಯೆ ಮಾಡಿದ್ದು, ಇದರ ಮಧ್ಯೆ 300 ಗುಂಡು ಹಾರಿಸಿ ರಷ್ಯಾದ ಶಸ್ತ್ರಸಜ್ಜಿತ 280 ಯುದ್ಧ ಟ್ಯಾಂಕ್ ನಾಶ ಮಾಡಿದಾಗಿ ತಿಳಿದು ಬಂದಿದೆ.

Javelin missiles in Ukraine
Javelin missiles in Ukraine

ಕೀವ್​(ಉಕ್ರೇನ್​): ಉಕ್ರೇನ್​ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದು, ಉಭಯ ದೇಶಗಳ ಮಧ್ಯೆ ಯುದ್ಧ ನಡೆಯುತ್ತಿದೆ. ಕಳೆದ 9 ದಿನಗಳು ಕಳೆದ್ರೂ ಕೂಡ ಉಕ್ರೇನ್​ ಮಾತ್ರ ಯುದ್ಧಭೂಮಿಯಿಂದ ಹಿಂದೆ ಸರಿದಿಲ್ಲ. ಏಟಿಗೆ ತಿರುಗೇಟು ನೀಡುತ್ತಿರುವ ಉಕ್ರೇನ್​​ ರಷ್ಯಾದ ಬಲಿಷ್ಠ ಶಸ್ತ್ರಸಜ್ಜಿತ ಯುದ್ಧ ಟ್ಯಾಂಕರ್​ ಧ್ವಂಸಗೊಳಿಸಿದೆ.

ರಷ್ಯಾ ಯೋಧರಿಗೆ ಸರಿಯಾದ ತಿರುಗೇಟು ನೀಡುತ್ತಿರುವ ಉಕ್ರೇನ್​ ಇಲ್ಲಿಯವರೆಗೆ 6 ಸಾವಿರಕ್ಕೂ ಅಧಿಕ ಎದುರಾಳಿ ಸೈನಿಕರ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ. ಇದರ ಮಧ್ಯೆ ರಷ್ಯಾದ ಆಕ್ರಮಣ ತಡೆಯಲು ಅದರ 280 ಯುದ್ಧ ಟ್ಯಾಂಕ್ ನಾಶ ಮಾಡಿದೆ.

ಉಕ್ರೇನಿಯನ್ ಮಿಲಿಟರಿ ಪಡೆಗೆ ಯುಎಸ್​​ ಒದಗಿಸಿರುವ ಹ್ಯಾಂಡ್​ ಹೆಲ್ಡ್​ ಟ್ಯಾಂಕ್​ ವಿರೋಧಿ ಕ್ಷಿಪಣಿ ಸಹಾಯದಿಂದ ರಷ್ಯಾದ 280 ಶಸ್ತ್ರಸಜ್ಜಿತ ವಾಹನ ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ.ರೇಥಿಯಾನ್​ ಮಿಸೈಲ್ಸ್​ ಮತ್ತು ಡಿಫೆನ್ಸ್​ ಲಾಕ್ಹೀಡ್ ಮಾರ್ಟಿನ್ ಜಂಟಿಯಾಗಿ ಈ ಜಾವೆಲಿನ್​ ತಯಾರು ಮಾಡಿದ್ದು, ಎದುರಾಳಿಗಳ ಮೇಲೆ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.​ ಲಭ್ಯವಾಗಿರುವ ಮಾಹಿತಿ ಪ್ರಕಾರ ಈವರೆಗೆ ರಷ್ಯಾದ ಸುಮಾರು 9,166 ಸೈನಿಕರು, 37 ಹೆಲಿಕಾಪ್ಟರ್​ಗಳು, 251 ಟ್ಯಾಂಕರ್​ಗಳು ಉಕ್ರೇನ್ ದಾಳಿಗೆ ನಾಶವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 'ಯುದ್ಧ ಬೇಡ..' ರಷ್ಯಾ ವಾಹಿನಿಯೊಂದರ ನೇರಪ್ರಸಾರದಲ್ಲೇ ಸಿಬ್ಬಂದಿ ರಾಜೀನಾಮೆ

ಉಕ್ರೇನ್​ಗೆ ಬುಲೆಟ್​ ಪ್ರೂಫ್​ ಜಾಕೆಟ್​: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ 9ನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ದೇಶಗಳಿಂದ ಉಕ್ರೇನ್​ಗೆ ಶಸ್ತ್ರಾಸ್ತ್ರ, ಮಾನವೀಯ ಸಹಾಯ ನೀಡುತ್ತಿದೆ. ಇದೀಗ ಚಿಕ್ಕ ದೇಶ ಉಕ್ರೇನ್​ಗೆ ಜಪಾನ್​ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.