ರೋಮ್: ಕೊರೊನಾದಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಇಟಲಿ ಸರ್ಕಾರ ತನ್ನ ನೌಕರರ ವೇತನ ತೆರಿಗೆಯನ್ನು ಕಡಿತಗೊಳಿಸುವ ಚಿಂತನೆ ನಡೆಸಲಾಗುತ್ತಿದೆ.
ಇಟಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರವಾಸೋದ್ಯಮ ಕುಸಿತದಿಂದಾಗಿ ಅನೇಕ ವ್ಯವಾಹರಗಳು ತೊಂದರೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಗೆ ಚೈತನ್ಯ ನೀಡಲು 10 ಬಿಲಿಯನ್ ಯುರೋ ಸಹಾಯ ನೀಡಲು ಯುರೋಪಿಯನ್ ಒಕ್ಕೂಟಕ್ಕೆ ಮನವಿ ಮಾಡಿರುವುದಾಗಿ ಆರ್ಥಿಕ ಸಚಿವರು ಹೇಳಿದ್ದಾರೆ. ಈ ಬಗ್ಗೆ ಇಂದು ಸಭೆ ನಡೆಯಲಿದ್ದು, ಸಭೆಯಲ್ಲಿ ಸರ್ಕಾರ ಗೃಹ ಕೈಗಾರಿಕೆ ಮತ್ತು ಸಣ್ಣ ವ್ಯಾಪಾರಗಳಿಗೆ ಔಪಚಾರಿಕವಾಗಿ ಬೆಂಬಲ ಸೂಚಿಸುವ ನಿರೀಕ್ಷೆಯಿದೆ.
ಕರೋನಾ ವೈರಸ್ ಹಾವಳಿಯಿಂದ ಉಂಟಾದ ಬಿಕ್ಕಟ್ಟು ಹಾಗೂ ಅದನ್ನು ನಿವಾರಣೆ ದೃಷ್ಟಿಯಿಂದ ನೌಕರರ ಸಂಬಳದಲ್ಲಿ ತೆರಿಗೆ ರೂಪದಲ್ಲಿ ಹಿಡಿದುಕೊಳ್ಳುತ್ತಿದ್ದ ನೀತಿಯನ್ನ ಕೈಬಿಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಇಟಲಿಯ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ 2008-09ರ ಆರ್ಥಿಕ ಹಿಂಜರಿತದಂತೆಯೇ, ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಇದ್ದು ಈ ಹಂತದಲ್ಲಿ ಇದರ ವ್ಯಾಪ್ತಿಯನ್ನು ಅಳೆಯುವುದು ತುಂಬಾ ಕಷ್ಟ ಎಂದು ಅಲ್ಲಿನ ಅರ್ಥಶಾಸ್ತ್ರಜ್ಞರು ತಮ್ಮ ಸಂಶೋಧನಾ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಇಟಲಿಯ ಆರ್ಥಿಕ ಬಿಕ್ಕಟ್ಟು ಪರಿಹರಿಸಲು 7.5 ಬಿಲಿಯನ್ ಯೂರೋ ಹಣವೂ ಸಾಕಾಗುತ್ತಿಲ್ಲ. ಇದರ ಖರ್ಚನ್ನು ಸುಮಾರು 10 ಬಿಲಿಯನ್ ಯುರೋಗಳಷ್ಟು ಹೆಚ್ಚಿಸಲು ರೋಮ್ ಕಾರ್ಯನಿರ್ವಹಿಸುತ್ತಿದೆ ಎಂದು ಆರ್ಥಿಕ ಅಭಿವೃದ್ದಿ ಸಚಿವ ಸ್ಟೆಫಾನೊ ಪೆಟುನಲ್ಲಿ ರೆಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.
ಕೇವಲ ಎರಡೇ ವಾರದಲ್ಲಿ ಮೆಡಿಟರೇನಿಯನ್ ದೇಶದಲ್ಲಿ 9,000 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೊಂಕು ತಗುಲಿದ್ದು, ಇದರಿಂದ ಇಟಲಿ ಸರ್ಕಾರ ತಾತಾಲ್ಕಿಕವಾಗಿ ಸಾರ್ವಜನಿಕರ ಪ್ರಯಾಣವನ್ನು ನಿರ್ಬಂಧಿಸಿ, ಸಭೆ ಸಮಾರಂಭಗಳ ಮೇಲೆ ನಿಷೇಧ ಹೇರಿದೆ.