ಡಮಾಸ್ಕಸ್(ಸಿರಿಯಾ): ಇಸ್ರೇಲ್ ಸೋಮವಾರ ರಾತ್ರಿ ಸಿರಿಯಾ ರಾಜಧಾನಿ ಡಮಾಸ್ಕಸ್ನ ದಕ್ಷಿಣ ಭಾಗದಲ್ಲಿ ಕ್ಷಿಪಣಿ ದಾಳಿ ಮಾಡಿದ್ದರ ಪರಿಣಾಮ ಇಬ್ಬರು ಸೈನಿಕರು ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಮಾಸ್ಕಸ್ನ ದಕ್ಷಿಣ ಭಾಗದಲ್ಲಿರುವ ಸಿರಿಯನ್ ಮಿಲಿಟರಿ ಪೋಸ್ಟ್ಗಳನ್ನು ಇಸ್ರೇಲ್ ಕ್ಷಿಪಣಿಗಳು ಗುರಿಯಾಗಿಸಿಕೊಂಡಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದು, ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾತ್ರಿ ಸುಮಾರು 10.40ಕ್ಕೆ ದಾಳಿ ಆರಂಭವಾಗಿದ್ದು, ಸಿರಿಯಾದ ಇಸ್ರೇಲ್ ಆಕ್ರಮಿತ ಪ್ರದೇಶವಾದ ಗೋಲನ್ ಹೈಟ್ಸ್ ಎಂಬ ಪ್ರದೇಶದಿಂದ ಕ್ಷಿಪಣಿಗಳನ್ನು ಗುರಿ ಇಡಲಾಗಿದೆ. ಕ್ಷಿಪಣಿ ದಾಳಿಯ ನಂತರ ಸ್ಫೋಟದ ಸದ್ದು ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬ್ರಿಟನ್ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಸಿರಿಯಾ ಇಸ್ರೇಲ್ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ಸ್ಪಷ್ಟನೆ ನೀಡಿದೆ. ಸಿರಿಯಾದಲ್ಲಿ ಇರಾನ್ ಸೇನೆ ಬೀಡು ಬಿಟ್ಟಿದ್ದು, ಇದೇ ಕಾರಣದಿಂದ ಇಸ್ರೇಲ್ ದಾಳಿ ನಡೆಸಿದೆ ಎನ್ನಲಾಗುತ್ತಿದ್ದು, ಕಳೆದ ಮೂರು ತಿಂಗಳಿನಲ್ಲಿ ಕನಿಷ್ಠ ಎಂಟು ಬಾರಿ ಇಸ್ರೇಲ್ ವಾಯು ದಾಳಿ ನಡೆಸಿದೆ ಎಂದು ಸಿರಿಯಾ ಆರೋಪಿಸಿದೆ. ಇದಕ್ಕೂ ಮೊದಲು ಜುಲೈ 20ರಂದು ಇಸ್ರೇಲ್ ದಾಳಿ ನಡೆಸಿತ್ತು.
ಇರಾನ್ ಸಿರಿಯಾಗೆ ಮಿತ್ರ ರಾಷ್ಟ್ರವಾಗಿದ್ದು, ಇದು ಪಕ್ಕದ ಇಸ್ರೇಲ್ಗೆ ಭೀತಿಯನ್ನುಂಟು ಮಾಡಿದೆ. ಇದರಿಂದಾಗಿ ಆಗಾಗ ಸಿರಿಯಾದಲ್ಲಿರುವ ಇರಾನ್ ಸೇನೆಯ ಮೇಲೆ ದಾಳಿ ಮಾಡುವುದೂ ಸಾಮಾನ್ಯವಾಗಿದೆ.