ETV Bharat / international

ಎಲ್ಲ ರಾಷ್ಟ್ರಗಳು ಮೂರನೇ ಡೋಸ್​​​​ನಲ್ಲಿದ್ದರೆ, ಈ ಪುಟ್ಟ ರಾಷ್ಟ್ರದಲ್ಲಿ 4ನೇ ಡೋಸ್​ ಲಸಿಕಾ ಅಭಿಯಾನ!

author img

By

Published : Jan 18, 2022, 7:28 AM IST

ಹಂಗೇರಿ ಸರ್ಕಾರ ಜನವರಿ 13 ರರಂದೇ ನಾಲ್ಕನೇ ಡೋಸ್​ ನೀಡುವ ಘೋಷಣೆ ಮಾಡಿತ್ತು. ವಿಶೇಷ ಎಂದರೆ ಕೆಲವರು ಇದಕ್ಕಿಂತ ಮುಂಚಿತವಾಗಿ ಫೋನ್​ ಕರೆಗಳನ್ನು ಮಾಡಿ ನಮಗೆ ಲಸಿಕೆ ನೀಡಿ ಎಂಬ ಬೇಡಿಕೆ ಇಟ್ಟಿದ್ದರು ಎಂದು ಆಂಡೋರ್ ಸೆಬೆಸ್ಟೈನ್ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ

Hungary starts administering fourth dose of Covid vaccine

ಬುಡಾಪೆಸ್ಟ್​: ಅಮೆರಿಕ ಸೇರಿದಂತೆ ಇತರ ಕೆಲ ರಾಷ್ಟ್ರಗಳು ಈಗ ಕೊರೊನಾ ಓಡಿಸಲು ಬೂಸ್ಟರ್​ ಡೋಸ್​ ಮೊರೆ ಹೋಗಿವೆ. ಆದರೆ ಹಂಗೇರಿ ಮಾತ್ರ ಅಮೆರಿಕ, ಭಾರತ, ಇಂಗ್ಲೆಂಡ್​, ಫ್ರಾನ್ಸ್​​, ಇಟಲಿಗಳಿಗಿಂತ ಭಾರಿ ಮುಂಜಾಗ್ರತೆ ಕ್ರಮ ಕೈಗೊಂಡಿದೆ.

ಎಲ್ಲರೂ ಮೂರನೇ ಡೋಸ್​​​ನಲ್ಲಿದ್ದರೆ ಹಂಗೇರಿ ಮಾತ್ರ ನಾಲ್ಕನೇ ಡೋಸ್​​ ನೀಡಲು ಸರ್ವ ಸನ್ನದ್ಧವಾಗಿದೆ. ಕೆಲವು ದಿನಗಳ ಹಿಂದೆ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಡೋಸ್​ ನೀಡಲು ಇಲ್ಲಿನ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈ ಪರಿಣಾಮವಾಗಿ 102 ವರ್ಷದ ವ್ಯಕ್ತಿ ಸೇರಿದಂತೆ ಸುಮಾರು 30 ಜನರು ಹಂಗೇರಿಯಲ್ಲಿ ನಾಲ್ಕನೇ ಡೋಸ್​ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಸಂಬಂಧವಾಗಿ ಲಸಿಕಾ ಪ್ರಮಾಣಪತ್ರವನ್ನೂ ಕೂಡಾ ಪಡೆದಿದ್ದಾರೆ ಎಂದು ಪೆಕ್ಸ್ ವಿಶ್ವವಿದ್ಯಾಲಯದ ಕ್ಲಿನಿಕಲ್ ಸೆಂಟರ್ ಹೇಳಿದೆ.

ಹಂಗೇರಿ ಸರ್ಕಾರ ಜನವರಿ 13ರಂದೇ ನಾಲ್ಕನೇ ಡೋಸ್​ ನೀಡುವ ಘೋಷಣೆ ಮಾಡಿತ್ತು. ವಿಶೇಷ ಎಂದರೆ ಕೆಲವರು ಇದಕ್ಕಿಂತ ಮುಂಚಿತವಾಗಿ ಫೋನ್​ ಕರೆಗಳನ್ನು ಮಾಡಿ ನಮಗೆ ಲಸಿಕೆ ನೀಡಿ ಎಂಬ ಬೇಡಿಕೆ ಇಟ್ಟಿದ್ದರು ಎಂದು ಆಂಡೋರ್ ಸೆಬೆಸ್ಟೈನ್ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯಾರಿಗೆ ಈ ನಾಲ್ಕನೇ ಡೋಸ್​?

ಒಂದು ಅಥವಾ ಹೆಚ್ಚು ದೀರ್ಘಕಾಲೀನ ಕಾಯಿಲೆಗಳಿಂದ (ಹೃದಯರಕ್ತನಾಳದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಮಧುಮೇಹ ಅಥವಾ ಕ್ಯಾನ್ಸರ್) ಬಳಲುತ್ತಿರುವ ವಯಸ್ಸಾದವರು ನಾಲ್ಕನೇ ಡೋಸ್​ ಪಡೆಯಬಹುದಾಗಿದೆ. ಇಂತಹವರೇ ಈಗ ನಾಲ್ಕನೇ ಡೋಸ್ ಪಡೆದು ಕೊರೊನಾದಿಂದ ಮುಕ್ತಿ ಪಡೆಯುತ್ತಿದ್ದಾರಂತೆ

ಹಠಾತ್​ ಕೊರೊನಾ ಸ್ಪೈಕ್​... ಹೀಗಾಗಿ ನಾಲ್ಕನೇ ಡೋಸ್​ ಮೊರೆ ಹೋದ ಹಂಗೇರಿ

ಹಠಾತ್​ ಆಗಿ ಕೊರೊನಾ ಸೋಂಕಿನ ಏರಿಕೆ ಹಿನ್ನೆಲೆಯಲ್ಲಿ ಹಂಗೇರಿ ಸರ್ಕಾರ 60 ವರ್ಷದ ಮೇಲ್ಪಟ್ಟವರಿಗೆ ನಾಲ್ಕನೇ ಡೋಸ್​ ನೀಡುವ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಈ ಮೂಲಕ ರೂಪಾಂತರಿ ಒಮಿಕ್ರಾನ್​ ಕಾಟಕ್ಕೆ ಬ್ರೇಕ್​ ಹಾಕಲು ಇಲ್ಲಿನ ವೈದ್ಯರು ಮುಂದಾಗಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಹಂಗೇರಿಯಲ್ಲಿ 21,219 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟಾರೆ 1,348,233ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ.

ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 270 ರಿಂದ 40,507 ಕ್ಕೆ ಏರಿಕೆ ಕಂಡಿದೆ. ಪ್ರಸ್ತುತ, 2,630 ಕೋವಿಡ್ -19 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. 228 ಜನ ವೆಂಟಿಲೇಟರ್​​​​ನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್‌ಗಳು ಸೇರಿದಂತೆ, 1,169,775 ಜನರು ಚೇತರಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.