ETV Bharat / international

ಅಮೆರಿಕ, ಇಸ್ರೇಲಿ ಅಧಿಕಾರಿಗಳ ಮೇಲೆ ಬೇಹುಗಾರಿಕೆ: ಸೊಲೈಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮುಂದಾಯ್ತಾ ಹಿಜ್ಬುಲ್ಲಾ ?

author img

By

Published : Nov 15, 2021, 7:50 AM IST

ಬೊಗೋಟಾದಲ್ಲಿ ಎರಡು ರಾಜತಾಂತ್ರಿಕ ನಿಯೋಗಗಳ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆಯಂತೆ. ಕೊಲಂಬಿಯಾದ ರಾಜಧಾನಿಯಲ್ಲಿ ಬೇಹುಗಾರಿಕೆ ಪತ್ತೆಯಾದ ಹಿನ್ನೆಲೆ ಇಸ್ರೇಲ್​ನ ಓರ್ವ ಮಾಜಿ ಗುಪ್ತಚರ ಅಧಿಕಾರಿಗೆ ರಕ್ಷಣೆ ನೀಡಲಾಗಿದೆ.

Hezbollah spying on US, Israeli officials

ಬೊಗೊಟಾ (ಕೊಲಂಬಿಯಾ): ಶಿಯಾ ಸಂಘಟನೆಯ ಹಿಜ್ಬುಲ್ಲಾ ಸದಸ್ಯರು ಕೊಲಂಬಿಯಾದಲ್ಲಿರುವ ಇಸ್ರೇಲಿ ಏಜೆಂಟ್‌ಗಳು ಮತ್ತು ಅಮೆರಿಕದ ರಾಜತಾಂತ್ರಿಕರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಎಲ್ ಟಿಂಪೊ ಪತ್ರಿಕೆ ವರದಿ ಮಾಡಿದೆ.

ಇಸ್ರೇಲ್‌ನ ಮೊಸಾದ್ ಗುಪ್ತಚರ ಸಂಸ್ಥೆಯ ವರದಿಯ ಪ್ರಕಾರ, ಬೊಗೋಟಾದಲ್ಲಿ ಎರಡು ರಾಜತಾಂತ್ರಿಕ ನಿಯೋಗಗಳ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆಯಂತೆ. ಕೊಲಂಬಿಯಾದ ರಾಜಧಾನಿಯಲ್ಲಿ ಬೇಹುಗಾರಿಕೆ ಪತ್ತೆಯಾದ ಹಿನ್ನೆಲೆ ಇಸ್ರೇಲ್​ನ ಓರ್ವ ಮಾಜಿ ಗುಪ್ತಚರ ಅಧಿಕಾರಿಗೆ ರಕ್ಷಣೆ ನೀಡಲಾಗಿದೆ.

ವರದಿಯ ಪ್ರಕಾರ, ಕೊಲಂಬಿಯಾದಲ್ಲಿ ಇಸ್ರೇಲಿ ಮತ್ತು ಅಮೆರಿಕನ್ ಅಧಿಕಾರಿಗಳ ಮೇಲೆ ಬೇಹುಗಾರಿಕೆ ಮತ್ತು ದಾಳಿಯ ಯೋಜನೆಗಳು ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳ ಗಣ್ಯ ಕುಡ್ಸ್ ಫೋರ್ಸ್‌ನ ಕಮಾಂಡರ್ ಖಾಸಿಮ್ ಸುಲೈಮಾನ್ ಅವರ ಹತ್ಯೆಗೆ ಪ್ರತೀಕಾರದ ಭಾಗವಾಗಿ ನಡೆಸಲಾಗುತ್ತಿದೆ ಎನ್ನಲಾಗಿದೆ. ಜನವರಿ 3, 2020 ರಂದು ಬಾಗ್ದಾದ್‌ನಲ್ಲಿ US ಡ್ರೋನ್ ದಾಳಿ ನಡೆಸಿ ಈ ಹತ್ಯೆ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.