ETV Bharat / international

ಅರಮನೆ ವೈಭೋಗದ ಜೀವನ ತೊರದ ಬಳಿಕ ಮೊದಲ ಸಲ ಕಾಣಿಸಿಕೊಂಡ ಹ್ಯಾರಿ, ಪತ್ನಿ ಮೇಘನ್​​!

author img

By

Published : Feb 8, 2020, 9:34 AM IST

ಅರಮನೆಯ ವೈಭೋಗದ ಜೀವನಕ್ಕೆ ವಿದಾಯ ಹೇಳಿ, ಸಾಮಾನ್ಯ ಜೀವನ ಸಾಗಿಸುತ್ತಿರುವ ಲಂಡನ್​ ಯುವರಾಜ್​ ಹಾಗೂ ಆತನ ಪತ್ನಿ ಇದೇ ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

Harry, Meghan
Harry, Meghan

ಲಂಡನ್​​: ರಾಜಮನೆತನದ ಯುವರಾಜ ಹ್ಯಾರಿ ಮತ್ತು ಮೇಘನ್ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗಳಿಗೆ ಗುಡ್ ಬೈ ಹೇಳಿದ್ದು, ಸಾಮಾನ್ಯ ಜೀವನ ನಡೆಸಲು ಮುಂದಾಗಿದ್ದಾರೆ. ರಾಜಾಧಿಕಾರ ತೊರೆದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಆ ಜೋಡಿ ಕಾಣಿಸಿಕೊಂಡಿದೆ.

ಜೆಪಿ ಮಾರ್ಗನ್​ ಆಯೋಜನೆ ಮಾಡಿದ್ದ ಸಮಾರಂಭವೊಂದರಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಈ ವೇಳೆ ಇಬ್ಬರು ಮಾತನಾಡಿದ್ದು, ತಾವು ಅರಮನೆಯ ಜವಾಬ್ದಾರಿಗಳಿಂದ ದೂರು ಉಳಿದು ಸಾಮಾನ್ಯ ಜೀವನ ನಡೆಸಲು ತೀರ್ಮಾನಿಸಿದ್ದು, ಯುಕೆ ಹಾಗೂ ನಾರ್ಥ್​ ಅಮೆರಿಕಾದಲ್ಲಿ ಜೀವನ ಸಾಗಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಹಣಕಾಸು ವಿಚಾರವಾಗಿ ಸ್ವತಂತ್ರರಾಗುವ ಉದ್ದೇಶದಿಂದ ರಾಜಮನೆತನದ ಸೌಲಭ್ಯಗಳನ್ನು ತೊರೆಯುತ್ತಿರುವುದಾಗಿ ಕೆಲ ವಾರಗಳ ಹಿಂದೆ ಹ್ಯಾರಿ ದಂಪತಿ ಘೋಷಿಸಿದ್ದರು. ಇದಕ್ಕೂ ಮುನ್ನ ಅವರು ಸ್ಯಾಂಡ್ರಿಘಾಮ್‌ ಎಸ್ಟೇಟ್‌ನಲ್ಲಿ ರಾಣಿ ಎಲಿಜಬತ್‌-2 ಜತೆಗೆ ದೀರ್ಘ ಸಭೆ ನಡೆಸಿ ಕಳೆದ ತಿಂಗಳು ಒಪ್ಪಿಗೆ ಪಡೆದುಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.