ಅಥೆನ್ಸ್: ಗ್ರೀಕ್‌ನ ಕ್ರೀಟ್ ದ್ವೀಪದಲ್ಲಿ ಮಂಗಳವಾರ 6.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಮುಂದಿನ ಎರಡು ದಿನಗಳಲ್ಲಿ ಪ್ರಭಲ ಭೂಕಂಪವಾಗುವ ಸಾಧ್ಯತೆ ಇದೆ ಎಂದು ಅಥೆನ್ಸ್-ಮೆಸಿಡೋನಿಯನ್ ಸುದ್ದಿ ಸಂಸ್ಥೆ (ANA-MPA) ಬುಧವಾರ ವರದಿ ಮಾಡಿದೆ.
ಮಂಗಳವಾರ ಕ್ರೀಟ್ ಕರಾವಳಿಯಲ್ಲಿ ಸಂಭವಿಸಿದ ಭೂಕಂಪದ ನಂತರ, ಮತ್ತೇ ದ್ವೀಪದಲ್ಲಿ ಕ್ರಮವಾಗಿ 4 ಮತ್ತು 4.4 ರ ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ. ಇಪಿಪಿಒ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಪ್ರಭಲ ಭೂಕಂಪವಾಗುವ ಸಂಭವವಿದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ ಎಂದು ANA-MPA ಹೇಳಿದೆ.
ಎರಡು ವಾರಗಳ ಅಂತರದಲ್ಲಿ ಗ್ರೀಸ್‌ನ ದ್ವೀಪದಲ್ಲಿ ಆಗಿರುವ ಎರಡನೇ ಪ್ರಬಲ ಭೂಕಂಪನ ಇದಾಗಿದೆ. ಭೂಕಂಪನದ ಕೇಂದ್ರ ಬಿಂದು ಅಥೆನ್ಸ್‌ನಿಂದ 24 ಕಿ.ಮೀ. ದೂರದ ಜಾಕ್ರೊಸ್ ಎಂಬಲ್ಲಿ ಗುರುತಿಸಲಾಗಿದೆ ಎಂದು ಭೂಕಂಪನ ಮಾಪನ ಕೇಂದ್ರವು ಮಾಹಿತಿ ನೀಡಿದೆ.
ಮಂಗಳವಾರದ ಭೂಕಂಪ ಅಥವಾ ಅದರ ನಂತರದ ಭೂಕಂಪಗಳ ನಂತರ ಯಾವುದೇ ಮಾನವ ಸಾವು - ನೋವುಗಳು ವರದಿಯಾಗಿಲ್ಲ. ಅಗಿಯೊಸ್ ನಿಕೋಲೊಸ್ ನಲ್ಲಿ ಒಂದು ಸಣ್ಣ ಕಟ್ಟಡ ಕುಸಿದಿದ್ದು, ಹಲವಾರು ಕಟ್ಟಡಗಳಿಗೆ ಮಧ್ಯಮ ಹಾನಿಯಾಗಿದೆ ಎಂದು ವರದಿಯಾಗಿದೆ.